Wednesday, August 19, 2026

BDA Apartments

Home Front Page ಧ್ರುವ ಸರ್ಜಾ ಆರೋಗ್ಯವಾಗಿದ್ದಾರೆ…. ವದಂತಿಗಳಿಗೆ ಸ್ಪಷ್ಟನೆ

ಧ್ರುವ ಸರ್ಜಾ ಆರೋಗ್ಯವಾಗಿದ್ದಾರೆ…. ವದಂತಿಗಳಿಗೆ ಸ್ಪಷ್ಟನೆ

ಬೆಂಗಳೂರು, ಜುಲೈ 04, 2020 (www.justkannada.in): ಅಣ್ಣ ಚಿರಂಜೀವಿ ಸರ್ಜಾ ಸಾವಿನ ದುಃಖದಲ್ಲಿರುವ ಧ್ರುವ ಸರ್ಜಾ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ಸೇರಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಲೋ ಬಿಪಿ ಸಮಸ್ಯೆಯಿಂದ ಧ್ರುವ ಸರ್ಜಾ ಆಸ್ಪತ್ರೆ ಸೇರಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ಅವರು ಸದ್ಯಕ್ಕೆ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಅಣ್ಣನ ಅಕಾಲಿಕ ಮರಣದಿಂದಾಗಿ ನೋವಿನಲ್ಲಿರುವ ಧ್ರುವ ಕೊಂಚ ಅಸ್ವಸ್ಥರಾಗಿದ್ದು ನಿಜ. ಆದರೆ ಈಗ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಅವರು ಹೊರಗಡೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.