ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಲ್. ನಾಗೇಂದ್ರ….

ಮೈಸೂರು,ಆ,10,2020(www.justkannada.in):   ಮೈಸೂರಿನ ಚಾಮರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಎಲ್. ನಾಗೇಂದ್ರ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.mysore-mla-l-nagendra-development-works

ಚಾಮರಾಜ ಕ್ಷೇತ್ರ ವಾರ್ಡ ನಂ 2 ಮಂಚೇಗೌಡನ ಕೊಪ್ಪಲು ಉಮಾ ಮಹೇಶ್ವರಿ , ಗಣಪತಿ ದೇವಸ್ಥಾನದ ಮುಂಭಾಗದ ಉದ್ಯಾನವನ ಅಭಿವೃದ್ಧಿಗೆ ಶಾಸಕರ 10 ಲಕ್ಷ  ಅನುದಾನಲ್ಲಿ ಹಾಗೂ ಮಹಾಲಕ್ಷ್ಮಿ  ಸ್ವೀಟ್ ಮುಂಭಾಗದ ಉದ್ಯಾನವನ ಅಭಿವೃದ್ಧಿಗೆ 10 ಲಕ್ಷ ವೆಚ್ಚದಲ್ಲಿ ಶಾಸಕರಾದ ಎಲ್ ನಾಗೇಂದ್ರರವರು  ಗುದ್ದಲಿ ಪೂಜೆ ನೆರವೇರಿಸಿದರು.mysore-mla-l-nagendra-development-works

ನಗರ ಪಾಲಿಕೆ ಸದಸ್ಯೆ ಪ್ರೇಮಾ ಶಂಕರೇಗೌಡ , ಮಾಜಿ ಉಪ ಮೇಯರ್ ಮಹದೇವಪ್ಪ , ಕ್ಷೇತ್ರ ಅಧ್ಯಕ್ಷರಾದ ಸೋಮಶೇಖರ್ ರಾಜು ,ಉಪಾಧ್ಯಕ್ಷ ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿ ಪುನೀತ್ , ಚಿಕ್ಕವೆಂಕಟು , ಕಿರಣ್ ಗೌಡ , ಜಯಪ್ಪ , ಕಿರಣ್ ,ಮಹೇಶ , ಬೋರೇಗೌಡರು , ಶ್ರೀಧರ್ , ತನುಜಾ, ಪದ್ಮ , ಶೋಭಾ , ಗೋವಿಂದ ಮತ್ತು ದೇವಸ್ಥಾನದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Key words: mysore- MLA – L.Nagendra- development –works