ಕೊರೋನಾ ಸೇವೆಗೆ ‘ಸ್ವಯಂ ಪ್ರೇರಿತ ಕಾರ್ಯಪಡೆ’ : ಚಾಲನೆ ನೀಡಿ ಬೆಂಬಲ ವ್ಯಕ್ತಪಡಿಸಿದ ಜಾವಗಲ್ ಶ್ರೀನಾಥ್

ಮೈಸೂರು,ಆ,10,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಬ್ಬರಿಸುತ್ತಿರುವ ಕೊರೋನಾ ಮಹಾಮಾರಿ  ತಡೆಗಟ್ಟಲು ಜಿಲ್ಲಾಡಳಿತ ಹರಸಾಹಸಪಡುತ್ತಿದ್ದು, ಈ ಮಧ್ಯೆ ಕೊರೊನಾ ಸೇವೆಗಾಗಿ ಸ್ಥಳೀಯ ನಿವಾಸಿಗಳು ಸ್ವಯಂಪ್ರೇರಿತರಾಗಿ ನಿಂತದ್ದಾರೆ.

ಹೌದು, ಮೈಸೂರಿನ ಶಾರದಾದೇವಿನಗರದ ಸ್ಥಳೀಯ ನಿವಾಸಿಗಳೇ ಸೇರಿಕೊಂಡು ಕೊರೊನಾ ಕಾರ್ಯ ಪಡೆ ರಚನೆ ಮಾಡಿದ್ದಾರೆ. ವಾರ್ಡ್ ನಂ 45 ರ ನಿವಾಸಿಗಳು ಈ ಸ್ವಯಂಪ್ರೇರಿತ ಕಾರ್ಯ ಪಡೆ ರಚನೆ ಮಾಡಿದ್ದು ಈ ಮೂಲಕ ಕೊರೋನಾ ಸೋಂಕಿಗೆ ಒಳಗಾದ ಕುಟುಂಬಗಳಿಗೆ ಅಗತ್ಯ ಸೇವೆ ನೀಡಲುಈ ಸ್ವಯಂಸೇವಕರು ಮುಂದಾಗಿದ್ದಾರೆ.self-motivated-workforce-corona-service-mysore-javagal-srinath-support

ಇನ್ನು ಕಾರ್ಯಪಡೆಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್  ಅವರು ಚಾಲನೆ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್, ಹರೀಶ್ ಸೇರಿದಂತೆ ಕಾರ್ಯಪಡೆ ಸದಸ್ಯರು ಭಾಗಿಯಾಗಿದ್ದರು.

Key words: Self-motivated workforce.- Corona service-mysore- Javagal Srinath – support