ಹೆಚ್.ವಿಶ್ವನಾಥ್ ಭೇಟಿ ಮಾಡಿ ಮಾತುಕತೆ ನಡೆಸಿದ ಸಚಿವ. ವಿ.ಸೋಮಣ್ಣ: ಮಂತ್ರಿಗಿರಿ ನೀಡುವ ಕುರಿತು ಪ್ರತಿಕ್ರಿಯಿಸಿದ್ದು ಹೀಗೆ…..

ಮೈಸೂರು,ಡಿ,24,2019(www.justkannada.in): ಉಪಚುನಾವಣೆಯಲ್ಲಿ  ಹೆಚ್. ವಿಶ್ವನಾಥ್ ಅವರು ಸೋತಿದ್ದು ನೋವಿನ ಸಂಗತಿ. ವಿಶ್ವನಾಥ್ ಅವರ ಆರೋಗ್ಯ ಮತ್ತಷ್ಟು ಸುಧಾರಣೆ ಆಗಲಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನಿರೀಕ್ಷೆಯಲ್ಲಿರುವ ಹೆಚ್ ವಿಶ್ವನಾಥ್  ಅವರನ್ನ ಹಾಲಿ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ಮಾಡಿದರು. ಕೃಷ್ಣಮೂರ್ತಿಪುರಂ ನಿವಾಸದಲ್ಲಿ ಉಭಯ ನಾಯಕರ ನಡುವೆ ಮಾತುಕತೆ ನಡೆಯಿತು. ಹುಣಸೂರು ಉಪ ಚುನಾವಣೆ ಸೋಲಿನ ಬಳಿಕ ಮೊದಲ ಭೇಟಿ ಇದಾಗಿದ್ದು ಈ ವೇಳೆ  ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕಾರ್ಯಕರ್ತರು ಭಾಗಿಯಾಗಿದ್ದರು.

ಹೆಚ್.ವಿಶ್ವನಾಥ್ ಭೇಟಿ ಮಾತುಕತೆ ಬಳಿಕ ಮಾತನಾಡಿದ ಸಚಿವ. ವಿ.ಸೋಮಣ್ಣ, ವಿಶ್ವನಾಥ್ ಅವರು ಸೋತಿದ್ದು ನೋವಿನ ಸಂಗತಿ. ನಮಗೆ ಬಹಳ ಬೇಜಾರಾದ ಸಂದರ್ಭದಲ್ಲಿ ಅವರನ್ನು ಹುಡುಕಿಕೊಂಡು ಹೋಗಿ ಭೇಟಿ ಮಾಡುತ್ತಿದ್ದೆ. ಅವರಿಗೆ ಸರಸ್ವತಿ ಬಹಳ ಚೆನ್ನಾಗಿ ಇದೆ. ಸೋಲು- ಗೆಲುವು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ವಿಶ್ವನಾಥ್ ಅವರ ಆರೋಗ್ಯ ಮತ್ತಷ್ಟು ಸುಧಾರಣೆ ಆಗಲಿ ಎಂದು ಹಾರೈಸಿದರು.

ವಿಶ್ವನಾಥ್ ಅವರಿಗೆ ಸಚಿವ ಸ್ಥಾನಮಾನ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿ.ಸೋಮಣ್ಣ, ನಮ್ಮ ಪಕ್ಷದ ಹಿರಿಯರು, ಯಡಿಯೂರಪ್ಪ ಇದ್ದಾರೆ. ಹೈಕಮಾಂಡ್ ಸಹ ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಸದ್ಯ ಯಾವ ನಿರ್ಧಾರ ಮಾಡಿದ್ದಾರೆ. ಅನ್ನೋದು ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ನಂಬಿದವರನ್ನು ಯಡಿಯೂರಪ್ಪ ಅವರು ಕೈಬಿಡಲ್ಲ ಎಂದು ಹೇಳಿದರು.

Key words: mysore- minister – V. Somanna- met -H. Vishwanath