Tuesday, September 22, 2026

BDA Apartments

ಕಿರಿಕ್ ಬೆಡಗಿ ರಶ್ಮಿಕಾ ಮಂದಣ‍್ಣ ಈಗ ನ್ಯಾಷನಲ್ ಕ್ರಷ್ ! BDA JK_Adv BDA Adv
Home Front Page ಎಂಗೇಜ್ಮೆಂಟ್’ಗೆಂದು ಬಂದ ವಧುವಿನ ಗೆಳತಿ ಏನ್ ಮಾಡಿದ್ಲು ಗೊತ್ತ..?

ಎಂಗೇಜ್ಮೆಂಟ್’ಗೆಂದು ಬಂದ ವಧುವಿನ ಗೆಳತಿ ಏನ್ ಮಾಡಿದ್ಲು ಗೊತ್ತ..?

ಮೈಸೂರು, ಆಗಸ್ಟ್, 22, 2020 : ನಿಶ್ಚಿತಾರ್ಥದ ಮನೆಯಲ್ಲಿ ಕಳ್ಳತನ ಮಾಡಿದ್ದ ಯುವತಿಯನ್ನು ಮೇಟಗಳ್ಳಿ ಪೋಲಿಸರು ಬಂಧಿಸಿ 4 ಲಕ್ಷದ 15 ಸಾವಿರ ರೂ. ಬೆಲೆಬಾಳುವ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಕುಂಬಾರಕೊಪ್ಪಲಿನ ಸುಭಾಷ್‌ನಗರದ ನಿವಾಸಿ ರಮೇಶ್ ಎಂಬುವವರ ಮನೆಯಲ್ಲಿ ಆಗಸ್ಟ್, 23ರಂದು ಮಗಳ ನಿಶ್ಚಿತಾರ್ಥ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಮೇಶ್ ಪುತ್ರಿ ಚಿನ್ನಾಭರಣಗಳನ್ನು ಧರಿಸಿ, ಕಾರ್ಯಕ್ರಮ ಮುಗಿದ ಬಳಿಕ ಅವುಗಳನ್ನು ಮನೆಯೊಳಗೆ ಆಲ್ಮೇರಾದಲ್ಲಿ ಬಿಚ್ಚಿಟಿದ್ದರು. ಅದೇ ದಿವಸ ಸಂಜೆ ನೆಂಟರೆಲ್ಲಾ ಮನೆಯಿಂದ ಹೋದ ಮೇಲೆ ಅಲ್ಮೇರಾದಲ್ಲಿದ್ ಒಡವೆಗಳನ್ನು ನೋಡಿದಾಗ ಅವುಗಳು ಕಾಣಿಯಾಗಿದ್ದವು. ಈ ಕುರಿತು ಮೇಟಗಳ್ಳಿ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಲಾಗಿತ್ತು.


ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 25ರಂದು ಮೇಟಗಳ್ಳಿ ಪೊಲೀಸರು ಕಾರ್ಯಚರಣೆ ನಡೆಸಿ ನಿಶ್ಚಿತಾರ್ಥ ದಿನದಂದು ಮನೆಗೆ ಆಗಮಿಸಿದ ಮಗಳ ಪರಿಚಿತಳಾದ ಆಶ್ರಿತ(21) ವಿಚಾರಣೆಗೆ ಒಳಪಡಿಸಿದಾಗ ಒಡವೆಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ಆಕೆಯನ್ನು ಬಂಧಿಸಿ, 4 ಲಕ್ಷದ 15ಸಾವಿರ ಬೆಲೆ ಬಾಳುವ 85 ಗ್ರಾಂ ತೂಕದ ಎರಡು ನಕ್ಲೇಸ್‌ಗಳು, ಒಂದು ಜೊತೆ ಓಲೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸ್ ಆಯುಕ್ತರ ಕಚೇರಿ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.