Tuesday, September 22, 2026

BDA Apartments

ಮನೆಯ ಕೊಟ್ಟಿಗೆಗೆ ನುಗ್ಗಿ ತೆನೆ ಕುರಿ ಹೊತ್ತೊಯ್ದ ಚಿರತೆ BDA JK_Adv BDA Adv
Home Front Page ಮನೆಯ ಕೊಟ್ಟಿಗೆಗೆ ನುಗ್ಗಿ ತೆನೆ ಕುರಿ ಹೊತ್ತೊಯ್ದ ಚಿರತೆ..

ಮನೆಯ ಕೊಟ್ಟಿಗೆಗೆ ನುಗ್ಗಿ ತೆನೆ ಕುರಿ ಹೊತ್ತೊಯ್ದ ಚಿರತೆ..

ಮೈಸೂರು,ಸೆ,11,2019(www.justkannada.in): ಇಲವಾಲ ಬಳಿಯ ಮೈದನಹಳ್ಳಿಯಲ್ಲಿ ಕೊಟ್ಟಿಗೆಯೊಂದಕ್ಕೆ ನುಗ್ಗಿದ ಚಿರತೆ ತೆನೆ ಕುರಿಯನ್ನು ಹೊತ್ತೊಯ್ದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಮೈದನಹಳ್ಳಿಯ ಕೊಟ್ಟಿಗೆಗೆ ನುಗ್ಗಿ ಚಿರತೆ ರಾಜಾರೋಷವಾಗಿ ತೆನೆಕುರಿಯನ್ನು ಹೊತ್ತೊಯ್ದಿದ್ದು, ಈ ಘಟನೆ ಮನೆಯ ಮಾಲೀಕರನ್ನು ಭಯಭೀತಗೊಳಿಸಿದೆ. ಚಿರತೆ ಯಾವುದೇ ವಾಹನದ ಸದ್ದಾದರೂ ಸ್ಥಳದಿಂದ ಕದಲದೇ ನೇರವಾಗಿ ನುಗ್ಗಿ ತೆನೆಕುರಿಯನ್ನ ಹೊತ್ತೊಯ್ದಿದೆ,

ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮನೆಯ ಮಾಲೀಕ, ಮನೆಯಲ್ಲಿ ಹೆಂಗಸರು, ಮಕ್ಕಳು ಇರುತ್ತಾರೆ. ಮನೆಗೂ ನುಗ್ಗಿ ಅನಾಹುತ ಸೃಷ್ಟಿಸಿದರೆ ಏನು ಮಾಡುವುದು ಎಂದು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆಯ  ಸಿಬ್ಬಂದಿಗಳಿಗೆ ಈಗಾಗಲೇ ಚಿರತೆ ಬಂದು ತೊಂದರೆ ಕೊಡುತ್ತಿರುವ ವಿಷಯವನ್ನು ತಿಳಿಸಿದ್ದೇವೆ. ಆದರೂ ಅವರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಎರಡು ವರ್ಷಗಳ ಹಿಂದೆ ಕೂಡ ಕೊಟ್ಟಿಗೆಗೆ ನುಗ್ಗಿದ ಚಿರತೆ ಕರುವನ್ನು ಹೊತ್ತೊಯ್ದಿತ್ತು. ಅದರ ಪರಿಹಾರವನ್ನು ಕೂಡ ನೀಡಲಿಲ್ಲ ಎಂದು ಅಲವತ್ತುಕೊಂಡಿದ್ದಾರೆ.ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Key words: mysore- leopard -carrying  – Sheep-crib – house.