ಡಿ.18 ರಂದು ಕಾನೂನು ಮಾಸ ಪತ್ರಿಕೆ ‘ಲಾ ಗೈಡ್ ‘ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ.

 

ಮೈಸೂರು, ಡಿ.16, 2021 : (www.justkannada.in news) : ಕಾನೂನು ಮಾಸ ಪತ್ರಿಕೆ ‘ಲಾ ಗೈಡ್ ‘ ವತಿಯಿಂದ 2022 ರ ದಿನದರ್ಶಿಕೆ ಮತ್ತು ಡೈರಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.

ಡಿ.18 ರಂದು ಬೆಳಗ್ಗೆ 11 ಗಂಟೆಗೆ ಮೈಸೂರು ಜಿಲ್ಲಾ ನ್ಯಾಯಾಲಯ ಮುಂಭಾಗದ ಹೋಟೆಲ್ ಏರ್ ಲೈನ್ಸ್ ನಲ್ಲಿ ಸಮಾರಂಭ ನಡೆಯಲಿದೆ. ಹೈಕೋರ್ಟ್ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಲಾಗೈಡ್ ಸಂಪಾದಕ ಎಚ್.ಎ.ವೆಂಕಟೇಶ್, ಹಿರಿಯ ವಕೀಲ ಎಂ.ಡಿ.ಹರೀಶ್ ಕುಮಾರ್ ಹೆಗ್ಡೆ, ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ವಿ,ರಾಮಮೂರ್ತಿ, ಹಿರಿಯ ವಕೀಲ ಎಸ್.ಲೊಕೇಶ್ ಹಾಗೂ ವಿಶೇಷ ಆಹ್ವಾನಿತರಾಗಿ ಹೈಕೋರ್ಟ್ ಹಿರಿಯ ವಕೀಲ ಎಸ್.ಪಿ.ಶಂಕರ್ ಭಾಗವಹಿಸುವರು.

key words : Mysore-law-guide-calendar-release-Kannada