ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಮತ್ತೆ ಜಿಟಿಡಿಯನ್ನ ಪಕ್ಷಕ್ಕೆ ಆಹ್ವಾನಿಸಿ ಕಣ್ಣೀರಿಟ್ಟ ಶಾಸಕ ಸಾರಾ ಮಹೇಶ್…

ಮೈಸೂರು,ಮಾರ್ಚ್,17,2021(www.justkannada.in): ನಿಮ್ಮನ್ನ ನಮ್ಮ ನಾಯಕರು ಅಂತ ಒಪ್ಪಿಕೊಂಡಿದ್ದೇವೆ. ಬನ್ನಿ ನಾಳೆಯಿಂದ ಜವಾಬ್ದಾರಿ ತೆಗೆದುಕೊಳ್ಳಿ. ಬೇಕಿದ್ರೆ ಬಂದು ಕುಮಾರಸ್ವಾಮಿ ಜೊತೆ ಸೇರಿ ಪಾರ್ಟಿ ಕಟ್ಟಿ ಎಂದು ಶಾಸಕ ಜಿ.ಟಿ ದೇವೇಗೌಡರಿಗೆ ಶಾಸಕ ಸಾ.ರಾ ಮಹೇಶ್  ಆಹ್ವಾನ ನೀಡಿದರು.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಾ.ರಾ ಮಹೇಶ್,  ನಾನು ರಾಜಕೀಯ ನಿವೃತ್ತಿ ಆಗ್ತಿನಿ. ಬೇಕಿದ್ರೆ ಬಂದು ಕುಮಾರಸ್ವಾಮಿ ಜೊತೆ ಸೇರಿ ಪಾರ್ಟಿ ಕಟ್ಟಿ. ಯಾಕೇ ನನ್ನ ಮೇಲೆ ಇಷ್ಟು ದ್ವೇಷ. ಯಾಕಾಗಿ ನನ್ನನ್ನ ವಿರೋಧ ಮಾಡ್ತಿರಾ. ನೀವು ಬರುವುದಾದರೆ ನಾನು ಪಾರ್ಟಿ ಬಿಡ್ತಿನಿ‌. ಇನ್ನೆರಡು ವರ್ಷ ಆದ ಮೇಲೆ ನಾನೇ ಸಾರ್ವಜನಿಕ ಜೀವನದಿಂದ ದೂರ ಇರ್ತಿನಿ. ನೀವು ಬೇಕಿದ್ರೆ ಬಂದು ಪಾರ್ಟಿ ಕಟ್ಟಿ ಎಂದು ಸುದ್ಧಿಗೋಷ್ಠಿಯಲ್ಲಿ ಕಣ್ಣೀರಿಟ್ಟರು.

ಶಕುನಿ, ಮಂಥರೆ ಎಂದ ಜಿಟಿಡಿಗೆ ತಿರುಗೇಟು…

ಇನ್ನು ತಮ್ಮನ್ನ ಶಕುನಿ ಮತ್ತು ಮಂಥರೆ ಎಂದಿದ್ದ ಶಾಸಕ ಜಿ.ಟಿ ದೇವೇಗೌಡರಿಗೆ ತಿರುಗೇಟು ನೀಡಿದ ಶಾಸಕ ಸಾ.ರಾ ಮಹೇಶ್, 2006 ರಲ್ಲಿ ಪಾರ್ಟಿ ಬಿಟ್ಟಾಗ ಯಾರು ನೋವು ಕೊಟ್ಟಿದ್ದು.? ನೀವೂ ಪಾರ್ಟಿಯಲ್ಲಿ ಇದ್ದ ಮೇಲೆ‌ ನೇತೃತ್ವ ವಹಿಸಿಕೊಂಡು ಮುನ್ನೆಡೆಸಿ ಎಂದು ಸಾರಾ ಮಹೇಶ್ ತಿಳಿಸಿದರು.

ಹುಣಸೂರಿನ ಉಪಚುನಾವಣೆಯಲ್ಲಿ ಯಾಕೆ ಹಾಗೆ ಮಾಡಿದ್ರೀ..? ಯಾಕೆ ಪಾಲಿಕೆ‌ ಚುನಾವಣೆಗೆ ಗೈರಾದ್ರಿ..? ನಮ್ಮ ತಪ್ಪು ಇದ್ದರೆ ನೀವೂ ತಿದ್ದಿಕೊಳ್ಳಿ. ನಿಮ್ಮನ್ನ ನಮ್ಮ ನಾಯಕರು ಅಂತ ಒಪ್ಪಿಕೊಂಡಿದ್ದೇವೆ. ಬನ್ನಿ ನಾಳೆಯಿಂದ ಜವಬ್ದಾರಿ ತೆಗೆದುಕೊಳ್ಳಿ. ಇದನ್ನ ಕೇಳಿದ್ರೆ ನನ್ನನ್ನ ಶಕುನಿ‌ ಅಂತ ಹೇಳ್ತೀರಾ..? ಮಹಾಭಾರತದಲ್ಲಿ ಶಕುನಿ ಇಲ್ಲದಿದ್ರೆ ಮಹಾಭಾರತ ನಡೆಯುತ್ತಿತ್ತ..? ಧರ್ಮ ಸಂಸ್ಥಾಪನೆ ಆಗ್ತಿತ್ತಾ.!. ನನ್ನನ್ನು ಮಂಥರೆ ಎಂದು ಪ್ರಸ್ತಾಪ‌ ಮಾಡ್ತೀರಾ.! ಮಂಥರೇ ಇಲ್ಲದಿದ್ರೆ ರಾವಣ ಸಂಹಾರ ಆಗ್ತಿತ್ತಾ.? ರಾಮ ರಾಜ್ಯ ನಿರ್ಮಾಣ ಆಗ್ತಿತ್ತ ಅವರಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಟಾಂಗ್ ನೀಡಿದರು.

ನೀವೂ ಆಲದ ಮರವಾಗಲು ಕುಮಾರಣ್ಣ ನೀರು ಹಾಕಿದ್ದಾರೆ…

ಜನತಾದಳವನ್ನ ಅಣಿಯಲು ಪಕ್ಷಗಳ ಜೊತೆ ಹೊಂದಾಣಿಕೆ‌ ಮಾಡಿಕೊಂಡಿದ್ದೀರಿ. ನಾನು ಆಲದ ಮರ ನನ್ನನ್ನು ಕಡಿಯಲು ಆಗಲ್ಲ‌ ಅಂತೀರಾ? ನಾವು ನಿಮ್ಮನ್ನ ಕಡಿತಿವಿ ಎಂದು ಎಲ್ಲೂ ಹೇಳಿಲ್ಲ. ಆಲದ ಮರ ಬೇರು ಬಿಟ್ಟರೆ ಪಕ್ಕದಲ್ಲಿ ಯಾವುದೇ ಬೇರು ಬಿಡಲು ಬಿಡೋದಿಲ್ಲ. ನಾನು ಅದನ್ನ ಅರಣ್ಯಾಧಿಕಾರಿ ಬಳಿ ಮಾಹಿತಿ ಪಡೆದುಕೊಂಡೆ. ನೀವೂ ಆಲದ ಮರವಾಗಲು ಕುಮಾರಣ್ಣ ನೀರು ಹಾಕಿದ್ದಾರೆ. ಅದಕ್ಕೆ ಸರಿಯಾದ ಸಸಿಯನ್ನ ಹುಡುಕಿ ನೆಡುವ ಕೆಲಸ ಕುಮಾರಣ್ಣ ಈಗ ಮಾಡ್ತಿದ್ದಾರೆ ಎಂದು ಸಾ.ರಾ ಮಹೇಸ್ ಹೇಳಿದರು.

ನಾನು‌ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನೀವು ಜೆಡಿಎಸ್‌ಗೆ ಬಂದು ಪಕ್ಷ ಸಂಘಟನೆ ಮಾಡಿ. ಕುಮಾರಣ್ಣ ಅವರ ಜೊತೆ  ಕಾರ್ಯಕರ್ತರ ಸಂಘಟನೆ ಮಾಡಿ. ನಮಗೆ ಜೆಡಿಎಸ್ ಚಿಹ್ನೆಯೇ ದೇವರು. ನಾಳೆಯೇ ಬನ್ನಿ ನಿಮ್ಮ ನೇತೃತ್ವದಲ್ಲೇ ಪಕ್ಷ ಸಂಘಟನೆ‌ ಮಾಡೋಣ ಎಂದು ಹೇಳುವ ಮೂಲಕ ಶಾಸಕ ಸಾ.ರಾ ಮಹೇಶ್ ಮತ್ತೆ ಜಿಟಿಡಿಯನ್ನ ಪಕ್ಷಕ್ಕೆ ಆಹ್ವಾನಿಸಿದರು.mysore-jds-mla-sa-ra-mahesh-gt-devegowda

ಕುಮಾರಸ್ವಾಮಿ ಅವರನ್ನ ಸಹಕಾರಿ ಕ್ಷೇತ್ರಕ್ಕೆ ಕರೆತರಬಾರದಿತ್ತು ಎಂಬಜಿಟಿ ದೇವೇಗೌಡರ ಹೇಳಿಕೆಗೆ ಗರಂ ಆದ ಸಾರಾ ಮಹೇಶ್, ಸರ್ಕಾರದ ಭಾಗವನ್ನ ಮತದಾನ ಮಾಡಬಹುದು ಎಂದು ತಂದವರು ಯಾರು.? ಸಬ್ ಡಿವಿಷನ್ ಎಂದು ತಂದು ಮತದಾನಕ್ಕೆ ಆದ್ಯತೆ ಕೊಟ್ಟವರು ಯಾರು.? ಅಂದು ನಿಮಗೆ ಅದು ನೆನಪಿಗೆ ಬರಲಿಲ್ಲವೇ.? ಕೆಲ ಮೈಮುಲ್ ಅಭ್ಯರ್ಥಿಗಳಿಗೆ ನಮ್ಮ ಟೀಂಗೆ ಬಂದರೆ ಮಾತ್ರ ಟಿಕೆಟ್ ಕೊಡ್ತಿನಿ ಎಂದವರು ಯಾರು.? ಪಿರಿಯಾಪಟ್ಟಣದ ಶಾಸಕರ ಮಗ ಹಾಗೂ ಮತ್ತೊಬ್ಬ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೀರಾ ಇಲ್ಲ. ಆ ಶಾಸಕರು ನಮ್ಮ ಜೆಡಿಎಸ್ ಪಕ್ಷದಿಂದ ಗೆದ್ದವರಲ್ಲವೇ.? ನಾಲ್ಕು ಕಡೆಗಳಲ್ಲಿ ಜೆಡಿಎಸ್ ಬೆಂಬಲಿತರಿಗೆ ನೀವು ಟಿಕೆಟ್ ಕೊಡಲಿಲ್ಲ. ಮೈಸೂರು ಹಾಗೂ ಹುಣಸೂರು ಸಬ್ ಡಿವಿಷನ್ ‌ನಲ್ಲಿ ಬಿಜೆಪಿ ಕಾಂಗ್ರೆಸ್, ನೀವೂ ಮೂರು ಜನ ಒಂದಾದ್ರಿ. ಆದರು ಇಲ್ಲಿ ರಾಜಕಾರಣ ಬೇಡ ಅಂತ ಹೇಳ್ತಿರಾ.? ಆದರು ಕುಮಾರಸ್ವಾಮಿ ಅವರನ್ನ ಇಲ್ಲಿಗೆ ತರಬಾರದಿತ್ತು ಅಂತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ENGLISH SUMMARY…..

‘Please come and join us in building the party’: MLA Sa. Ra. Mahesh calls MLA GTD
Mysuru, Mar. 17, 2021 (www.justkannada.in): MLA Sa. Ra. Mahesh today invited MLA G.T. Devegowda who has maintained distance from JDS party activities, to build the party along with former Chief Minister H.D. Kumaraswamy. “We have agreed you as our leader, please come and take over the responsibility of building the party along with H.D. Kumaraswamy,” he said.mysore-jds-mla-sa-ra-mahesh-gt-devegowda
Addressing a press meet in Mysuru today, MLA Sa. Ra. Mahesh said, “I will retire from politics. If you want, please build the party along with Kumaraswamy. Why are you so angry with me? Why are you opposing me so much? If you come I am ready to leave the party. I will stay away from public life after two years. If you wish you can only build the party.”
Responding to MLA G.T. Devegowda’s remarks calling him as ‘Shakuni’, ‘Mantare,’ MLA Sa. Ra. Mahesh questioned who gave pain while he left the party in 2006? When you are in the party you should lead it,” he added.
Keywords: MLA Sa. Ra. Mahesh/ MLA G.T. Devegowda/ JDS/ press meet/ Mysuru

Key words: mysore- jds MLA-sa ra Mahesh-GT devegowda