ಮದುವೆಯಾಗುವುದಾಗಿ ನಂಬಿಸಿ ಹಣ, ಒಡವೆ ಪೀಕಿ ವಂಚಿಸುತ್ತಿದ್ದ ಯುವತಿ ಅರೆಸ್ಟ್…

ಮೈಸೂರು,ಮಾರ್ಚ್,17,2021(www.justkannada.in): ಮದುವೆಯಾಗುವುದಾಗಿ ನಂಬಿಸಿ ಯುವಕರ ಬಳಿ ಹಣ, ಒಡವೆ ಪೀಕಿ ವಂಚಿಸುತ್ತಿದ್ದ ಖತರ್ನಾಕ್ ಕಳ್ಳಿಯನ್ನ ಮೈಸೂರಿನ ಮೇಟಗಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.jk

ಮೇಘ @ ಹರಿಣಿ  ಬಂಧಿತ ಯುವತಿ. ಈಕೆ ಓದಿರೋದು 10ನೇ ಕ್ಲಾಸ್, ಯಾಮಾರಿಸೋದ್ರಲ್ಲಿ ಕಳ್ಳರಿಗಿಂತ ಚಾಲಾಕಿ. ಹೌದು, ಈಕೆ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಯುವಕರನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು. ನಂತರ ಚಿನ್ನಾಭರಣ, ನಗದು ಪಡೆದು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಳ್ಳುತ್ತಿದ್ದಳು.

ಮೈಸೂರು, ಮಂಡ್ಯ, ಬೆಂಗಳೂರಿನಲ್ಲಿ ವಂಚನೆ ಎಸಗಿದ್ದಾಳೆ ಎನ್ನಲಾಗಿದೆ. ವಂಚಕಿ ಯುವತಿ ಮೇಘ ಬೆಂಗಳೂರಿನ ಅಂದರಹಳ್ಳಿ ಎರಡನೇ ಮುಖ್ಯ ರಸ್ತೆಯಲ್ಲಿ ವಾಸವಾಗಿದ್ದು, ಪ್ರತಿ ಬಾರಿ ಅಪರಾಧ ಮಾಡುವಾಗ ಮದ್ಯವರ್ತಿಗಳನ್ನಾಗಿ ಹೊಸಬರನ್ನೇ ಬಳಸಿಕೊಂಡು ತನ್ನ ಕೆಲಸ ಮುಗಿದ ನಂತರ ತನ್ನ ದೂರವಾಣಿ ಸಂಖ್ಯೆಯನ್ನು ಬದಲಾಯಿಸಿ ಅವರುಗಳ ಸಂಪರ್ಕ ಕಡಿತಗೊಳಿಸುತ್ತಿದ್ದಳು ಎನ್ನಲಾಗಿದೆ.arrested-young-woman-cheating-money-married

ವಂಚನೆ ಜಾಲದ ಬಗ್ಗೆ ಪೊಲೀಸರು ಸಮಗ್ರ ತನಿಖೆ ಮುಂದುವರಿಸಿದ್ದಾರೆ.  ಡಿ.ಸಿ.ಪಿ ಡಾ. ಎ.ಎನ್. ಪ್ರಕಾಶ್ ಗೌಡ, ನರಸಿಂಹರಾಜ ವಿಭಾಗದ ಎ.ಸಿ.ಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಠಾಣೆಯ ಇನ್ಸ್‍ಪೆಕ್ಟರ್ ಮಲ್ಲೇಶ್ ರಿಂದ ಈ ಪತ್ತೆ ಕಾರ್ಯ ನಡೆದಿದ್ದು, ಈಕೆಯಿಂದ ವಂಚನೆಗೊಳದಾವರು ಯಾರದರೂ ಇದ್ದರೆ, ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Key words: Arrested- young woman- cheating – money-married