18 ವರ್ಷಗಳಿಂದಲೂ ಹಾಸಿಗೆ ಹಿಡಿದಿರುವ ಮಕ್ಕಳು: ಸಹಾಯಕ್ಕಾಗಿ ಅಂಗಲಾಚಿದ ನೊಂದ ಪೋಷಕರು….

ಮೈಸೂರು,ಡಿ,26,2019(www.justkannada.in): ಕೈ-ಕಾಲು ಸರಿಯಾಗಿರುವ ಮಕ್ಕಳನ್ನೇ ಸಾಕಲು ಮಧ್ಯಮ ವರ್ಗದ ಕುಟುಂಬಗಳೇ ಹೆಣಗಾಡುತ್ತಿರುವ ಇತ್ತೀಚಿನ ದಿನಗಳಲ್ಲಿ, ಇಬ್ಬರು ವಿಶೇಷಚೇತನ ಮಕ್ಕಳನ್ನು ಸಾಕಲು ಬಡ ಕುಟುಂಬವೊಂದು ದಿಕ್ಕು ತೋಚದಂತಾಗಿ ದೇವಾಲಯ, ಆಸ್ಪತ್ರೆ,ರಾಜಕಾರಣಿ ಮನೆ ಕದ ತಟ್ಟಿದ್ದು ಆಯಿತು.ಆದರೆ ಬದುಕು ದುಸ್ತರವಾಗುತ್ತಿದೆಯೇ ಆಗುತ್ತಿದೆ ವಿನಹ. ಬದಲಾವಣೆಯಾಗುತ್ತಿಲ್ಲ.

ಹೌದು,ತಮ್ಮ ವಿಶೇಷಚೇತನ ಮಕ್ಕಳ ಸ್ಥಿತಿ ನೋಡಿ ತಂದೆ-ತಾಯಿಗೆ ಕೂಲಿ ಮಾಡಲು ಕೂಡ ಮನಸ್ಸಾಗುತ್ತಿಲ್ಲ. ದಿನನಿತ್ಯ ಇವರ ಮುಂದೇ ಕುಳಿತು ,ಮಕ್ಕಳ ಸ್ಥಿತಿ ನೋಡಿ ಕಣ್ಣೀರಿನ ನದಿಯನ್ನೇ ಹರಿಸುತ್ತಿದ್ದಾರೆ. 18 ವರ್ಷಗಳಿಂದ ಹಾಸಿಗೆ ಹಿಡಿದ ಮಕ್ಕಳು ಸ್ಥಿತಿ ನೋಡಿ ದಿನೇ ದಿನೇ ಪೋಷಕರ ಶಕ್ತಿ ಕುಂದುತ್ತಿದೆ.ಮುಂದೆ ನಮ್ಮ ಜೀವನ ಹೇಗೆ ಎಂಬ ನೋವಿನ ಚಿಂತೆ ಆವರಿಸಿಕೊಂಡಿದೆ.

ಎಚ್.ಡಿ.ಕೋಟೆ ತಾಲೂಕಿನಲ್ಲಿ ಮುಳ್ಳೂರು ಗ್ರಾಮದ ನಿವಾಸಿಯಾದ ಸಿದ್ದರಾಜಾಚಾರಿ ಹಾಗೂ ನಾಗಮ್ಮ ದಂಪತಿ ಅವರು ತಮ್ಮ ಮಕ್ಕಳಾದ 18 ವರ್ಷದ ಸವಿತಾ ಹಾಗೂ 16 ವರ್ಷದ ಸುನಿಲ್ ಕುಮಾರ್ ಅವರನ್ನೇ ಸಾಕುವುದೇ ಪೋಷಕರಿಗೆ ದೊಡ್ಡ ಸವಾಲಾಗಿದೆ. ಹುಟ್ಟುವಾಗಲೇ ವಿಶೇಷಚೇತನರಾಗಿ ಜನಸಿರುವ ಈ ಮಕ್ಕಳು, ತಮ್ಮ ಶಕ್ತಿಯಿಂದ ಕೈ-ಕಾಲು ಅಲುಗಾಡಿಸಲೂ ಸಾಧ್ಯವಾಗದೇ ಹುಟ್ಟಿದಾಗಿನಿಂದಲ್ಲೂ ಹಾಸಿಗೆಯಲ್ಲಿ ಮಲಗಿದ್ದಾರೆ.

ಸಿದ್ದರಾಜಾಚಾರಿ ಅವರು ಅನುಕೂಲಸ್ಥರಲ್ಲ, ಕೂಲಿಗೆ ಹೋದರೆ ಅವತ್ತಿನ ಜೀವನ ಸಾಗುತ್ತದೆ.ಇಲ್ಲವಾದರೇ ನಾಳೆಗೆ ಹೇಗೆ ಊಟ ಒದಗಿಸಿಕೊಳ್ಳುವುದೇ ಕಷ್ಟವಾಗಿದೆ,  ಮಕ್ಕಳು ಇಂದಲ್ಲ ನಾಳೆ ಎಲ್ಲ ಮಕ್ಕಳಂತೆ ಸರಿಯಾಗಬಹುದು ಎಂಬ ಆಸೆಯಿಂದ ನಾನಾ ಕಡೆ ಚಿಕಿತ್ಸೆ ಕೊಡಿಸಿದರು ಪ್ರಯೋಜನ ವಾಗ್ತಿಲ್ಲ. ದೇವರಿಗೆ ಹರಕೆ ಕಟ್ಟಿಕೊಂಡು ಪೂಜೆ ಮಾಡಿದ್ರೂ ದೇವರು ಕೈ ಹಿಡಿಯಲಿಲ್ಲ. ಚಿಕಿತ್ಸೆಯಿಂದಲ್ಲೂ ಗುಣಮುಖರಾಗಲಿಲ್ಲ.

ಇಬ್ಬರು ದುಡಿದು ಮಕ್ಕಳಿಗೆ ಬದುಕು ಕಟ್ಟಿಕೊಡಬೇಕು ಎಂಬ ಹಂಬಲವಿದೆ. ಆದರೆ, ಇಬ್ಬರು ಕೆಲಸಕ್ಕೆ ಹೋದರೆ ವಿಶೇಷ ಮಕ್ಕಳಿಗೆ ಯಾರು ಸಹಾಯ ಮಾಡುತ್ತಾರೆ.ಯಾರು ಅವರನ್ನು ಪ್ರೀತಿವಯಿಂದ ನೋಡಿಕೊಳ್ತಾರೆ. ಹೀಗೆ ಹತ್ತು ಹಲವು ಚಿಂತೆಗಳು ಆವರಿಸಿಕೊಳ್ಳುತ್ತವೆ. ದಾನಿಗಳು ಏನಾದರೂ ಕೈಲಾದ ಸಹಾಯ ಮಾಡಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಪೋಷಕರು ಮನವಿ ಮಾಡಿದ್ದಾರೆ.

ವಿಶೇಷಚೇತನ ಮಕ್ಕಳ ಪೋಷಣೆಗೆ ನಿಂತಿರುವ ಈ ಪೋಷಕರಿಗೆ ನೀವೂ ಕೂಡಾ ಸಹಾಯ ಮಾಡಬಹುದು.  ಸಿದ್ದರಾಜಾಚಾರಿಯವರು ಸರಗೂರಿನ ಕೆನರಾ ಬ್ಯಾಂಕ್‍ನಲ್ಲಿ ತಮ್ಮ ಖಾತೆ ಹೊಂದಿದ್ದಾರೆ. ಖಾತೆ ಸಂಖ್ಯೆ `4343101009154 ಹಾಗೂ ಐಎಫ್‍ಎಸ್‍ಸಿ ಕೋಡ್ CNB004343 ಆಗಿದ್ದು, ದಾನಿಗಳು ಮಕ್ಕಳ ಬಾಳಿಗೆ ಬೆಳಕಾಗಿ ಎಂದು ನೊಂದ ಜೀವಗಳು ಅಂಗಲಾಚಿವೆ.

Key words: mysore- hd kote- Children –Disabled -bed – 18 years-Parents – help