Thursday, August 13, 2026

BDA Apartments

Home Front Page ಜೋತಿಷ್ಯ ಮಂಡಳಿ ಸ್ಥಾಪಿಸಿ ಅದಕ್ಕೆ ಎಚ್.ಡಿ.ರೇವಣ್ಣರನ್ನು ಅಧ್ಯಕ್ಷರನ್ನಾಗಿ ಮಾಡ್ಬೇಕು: ಸಂಸದ ಶ್ರೀನಿವಾಸ್ ಪ್ರಸಾದ್

ಜೋತಿಷ್ಯ ಮಂಡಳಿ ಸ್ಥಾಪಿಸಿ ಅದಕ್ಕೆ ಎಚ್.ಡಿ.ರೇವಣ್ಣರನ್ನು ಅಧ್ಯಕ್ಷರನ್ನಾಗಿ ಮಾಡ್ಬೇಕು: ಸಂಸದ ಶ್ರೀನಿವಾಸ್ ಪ್ರಸಾದ್

ಮೈಸೂರು, ಡಿಸೆಂಬರ್ 01, 2019 (www.justkannada.in): ಮಾಜಿ ಸಚಿವ ಎಚ್​.ಡಿ.ರೇವಣ್ಣ ವಿರುದ್ಧ ಸಂಸದ ವಾಗ್ದಾಳಿ ನಡೆಸಿದ್ದಾರೆ.

ಜೋತಿಷ್ಯ ಮಂಡಳಿ ಕಟ್ಟಿ ಅದಕ್ಕೆ ರೇವಣ್ಣರನ್ನು ಅಧ್ಯಕ್ಷ ಮಾಡಬೇಕೆಂದು ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣ ಏನು ಹೇಳುತ್ತಾರೋ ಯಾರಿಗೆ ಗೊತ್ತು? ಅವರೆಲ್ಲ ಯಾವತ್ತಾದರೂ ಹೇಳಿದಂತೆ ನಡೆದುಕೊಂಡಿದ್ದಾರಾ ಅವರ ಮಾತಿಗೆ ಮನ್ನಣೆ ಕೊಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಸಿದ್ದು ಕಾಂಗ್ರೆಸ್ ಅನ್ನು ವೈಟ್​ವಾಷ್ ಮಾಡುತ್ತಿದ್ದಾರೆ. ವಿಶ್ವನಾಥ್ ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದಾರೆ. ಸಿದ್ದರಾಮಯ್ಯ ಉಡಾಫೆ ಹಾಗೂ ದುರಂಹಕಾರಿ ಎಂಬುವುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ತಿಳಿಸಿದರು.