Tuesday, September 29, 2026

BDA Apartments

ಸಿದ್ದರಾಮಯ್ಯ ಸಾವು ಕುರಿತ ಈಶ್ವರಪ್ಪ ಹೇಳಿಕೆಗೆ ಶ್ರೀರಾಮುಲು ಅಸಮಾಧಾನ BDA JK_Adv ...
Home Front Page ಸಿದ್ದರಾಮಯ್ಯ ಸಾವು ಕುರಿತ ಈಶ್ವರಪ್ಪ ಹೇಳಿಕೆಗೆ ಶ್ರೀರಾಮುಲು ಅಸಮಾಧಾನ

ಸಿದ್ದರಾಮಯ್ಯ ಸಾವು ಕುರಿತ ಈಶ್ವರಪ್ಪ ಹೇಳಿಕೆಗೆ ಶ್ರೀರಾಮುಲು ಅಸಮಾಧಾನ

ಮೈಸೂರು, ಡಿಸೆಂಬರ್ 01, 2019 (www.justkannada.in): ಸಿದ್ದರಾಮಯ್ಯ ಸಾವಿನ ಕುರಿತು ಸಚಿವ ಕೆ.ಎಸ್. ಈಶ್ವರಪ್ಪ ನೀಡಿರುವ ಹೇಳಿಕೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹುಣಸೂರಿನಲ್ಲಿ ಪ್ರಚಾರದ ವೇಳೆ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಇನ್ನೆಷ್ಟು ದಿನ ಬದುಕಿರುತ್ತಾರೆ ಎಂದು ಈಶ್ವರಪ್ಪ ನೀಡಿರುವ ಹೇಳಿಕೆ ಸರಿಯಲ್ಲ, ರಾಜಕೀಯ ಬೇರೆ, ವೈಯಕ್ತಿಕ ಬೇರೆ, ರಾಜಕೀಯದಲ್ಲಿ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ರಾಣೆಬೆನ್ನೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿದ್ದ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯ ಇನ್ನೆಷ್ಟು ದಿನ ಬದುಕುತ್ತಾರಾ ಎಂದಿದ್ದರು. ಇದಕ್ಕೆ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನನ್ನ ಸಾವು ಬಯಸುವ ಈಶ್ವರಪ್ಪ ನೂರು ಕಾಲ ಬದುಕಲಿ ಎಂದು ಹಾರೈಸಿದ್ದರು.