Friday, August 7, 2026

BDA Apartments

Home Front Page ಹೆಚ್.ವಿಶ್ವನಾಥ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ: ಪ್ರತ್ಯೇಕ ಮಾತುಕತೆ.

ಹೆಚ್.ವಿಶ್ವನಾಥ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ: ಪ್ರತ್ಯೇಕ ಮಾತುಕತೆ.

ಮೈಸೂರು,ಜುಲೈ,5,2021(www.justkannada.in):   ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರನ್ನ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿಯಾಗಿ ಮಾತುಕತೆ ನಡೆಸಿದರು.jk

ಮೈಸೂರಿನ ಖಾಸಗಿ ಹೋಟೆಲ್‌ ನಲ್ಲಿ ಭೇಟಿಯಾದ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ.  ಬೆಳಗ್ಗೆಯಿಂದಲೂ ಮೈಸೂರಿನಲ್ಲಿರುವ ಶಾಸಕ ಯತ್ನಾಳ್, ಚಾಮುಂಡಿ ಬೆಟ್ಟ ನಂಜನಗೂಡು ದೇವನೂರು ಮಠ ಹೊಸ ಮಠಕ್ಕೆ ಭೇಟಿ  ನೀಡಿದ್ದರು. ಇದೀಗ ಹಳ್ಳಿಹಕ್ಕಿ ಹೆಚ್. ವಿಶ್ವನಾಥ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇದೇ ವೇಳೆ ಎಲ್ಲರೂ ಸುತ್ತೂರು ಮಠಕ್ಕೆ ಹೋಗ್ತಾರೆ..ನೀವ್ ಹೋಗಲಿಲ್ಲಲ್ವಾ ಎಂದು ವಿಶ್ವನಾಥ್ ಕೇಳಿದರು. ಇದಕ್ಕೆ ಉತ್ತರಿಸಿದ ಶಾಸಕ ಯತ್ನಾಳ್, ಇಲ್ಲ ಸಾರ್..ನಾನ್ ಹೋಗಲಿಲ್ಲ, ಎಲ್ಲರಿಗಿಂತ ಸ್ವಲ್ಪ ಡಿಫರೆಂಟ್ ಇರಬೇಕಲ್ವಾ..? ಅಲ್ಲದೇ ಇವತ್ತು ಸೋಮಶೇಖರ್ ಕೂಡಾ ಹೋಗಿದ್ರಲ್ಲಾ..? ಎಂದು ಸುತ್ತೂರು ಮಠಕ್ಕೆ ಹೋಗದಿದ್ದಕ್ಕೆ ಸಮಜಾಯಿಷಿ ನೀಡಿದರು. ಬಳಿಕ ಯತ್ನಾಳ್ ಕೊಠಡಿಗೆ ತೆರಳಿ ಉಭಯ ನಾಯಕರು ಪ್ರತ್ಯೇಕ ಮಾತುಕತೆ ನಡೆಸಿದರು.

Key words: mysore- H.Vishwanath – MLA- Basanagouda Patil Yatnal- meet