ಕೋವಿಡ್ ಸಾವಿನ ಹೊಣೆ ಕಾಂಗ್ರೆಸ್ ನವರೇ ಹೊರಬೇಕು- ಡಿಸಿಎಂ ಗೋವಿಂದ ಕಾರಜೋಳ

0
245

ಬಾಗಲಕೋಟೆ,ಜುಲೈ,5,2021(www.justkannada.in):  ಲಸಿಕೆ ಬಗ್ಗೆ ಜನರಿಗೆ ತಪ್ಪು ಕಲ್ಪನೆ ನೀಡಿದ್ದು ಕಾಂಗ್ರೆಸ್‌ನವರು ಕೊರೊನಾ ಸಾವಿನ ಹೊಣೆ ಕಾಂಗ್ರೆಸ್‌ನವರೇ ಹೊರಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಕಿಡಿಕಾರಿದರು.jk

ಬಾಗಲಕೋಟೆಯಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಜನರು ಮೊದಲು ಲಸಿಕೆ ಪಡೆಯದಿರಲು ಕಾಂಗ್ರೆಸ್ ಕಾರಣ. ಮೊದಲು ಲಸಿಕೆ ಪಡೆಯದ ಕಾರಣ ರಫ್ತು ಮಾಡಲಾಯಿತು. ಹೆಚ್ಚು ದಿನ ಲಸಿಕೆ ಇಟ್ಟರೆ ಹಾಳಾಗುತ್ತೆ ಎಂದು ಲಸಿಕೆ ರಫ್ತು ಮಾಡಲಾಯಿತು ಎಂದು  ಹೇಳಿದರು.

ಇನ್ನು ಸಿಎಂ BSY ವಿರುದ್ಧ ಸಚಿವ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ನಾನು ಪದೇಪದೆ ಈ ವಿಚಾರ ಹೇಳಲು ಇಷ್ಟ ಪಡುವುದಿಲ್ಲ. ಕೊರೊನಾ ನಿರ್ವಹಣೆ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತೆ. ಪ್ರವಾಹ ಸಮಯದಲ್ಲಿ ಭಾರಿ ಪ್ರಮಾಣದಲ್ಲಿ ಹಾನಿಯಾಯ್ತು. ಪ್ರವಾಹಕ್ಕೆ ದೊಡ್ಡ ಮೊತ್ತದ ಪರಿಹಾರವನ್ನ ಸಿಎಂ ನೀಡಿದ್ದಾರೆ. ರಾಷ್ಟ್ರೀಯ ನಾಯಕರು ಸಿಎಂ BSY ಕಾರ್ಯ ಮೆಚ್ಚಿದ್ದಾರೆ. ಸಿಎಂ ಯಡಿಯೂರಪ್ಪ ನಾಯಕತ್ವದಲ್ಲೇ ಸರ್ಕಾರ ಇರುತ್ತೆ. ಹೈಕಮಾಂಡ್ ಮುಂದೆ ಸಿಎಂ ಬದಲಾವಣೆ ಪ್ರಸ್ತಾಪವಿಲ್ಲ ಎಂದರು.

Key words: Congress -responsible -covid’s- death-DCM- Govinda Karajola