Tuesday, September 22, 2026

BDA Apartments

ಗಣಪತಿ ಸಚ್ಚಿದಾನಂದ ಶ್ರೀಗಳು ಕೊಟ್ಟ ಉಡುಗೊರೆಯೊಂದಿಗೆ ಫಾರ್ಮ್ ಹೌಸ್’ನಲ್ಲಿ...
Home Cinema ಗಣಪತಿ ಸಚ್ಚಿದಾನಂದ ಶ್ರೀಗಳು ಕೊಟ್ಟ ಉಡುಗೊರೆಯೊಂದಿಗೆ ಫಾರ್ಮ್ ಹೌಸ್’ನಲ್ಲಿ ದಚ್ಚು!

ಗಣಪತಿ ಸಚ್ಚಿದಾನಂದ ಶ್ರೀಗಳು ಕೊಟ್ಟ ಉಡುಗೊರೆಯೊಂದಿಗೆ ಫಾರ್ಮ್ ಹೌಸ್’ನಲ್ಲಿ ದಚ್ಚು!

ಬೆಂಗಳೂರು, ಮೇ 14, 2021 (www.justkannada.in): ಮೈಸೂರಿನ ಹೊರವಲಯದಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಹೊಸ ಅತಿಥಿಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ ಚಾಲೆಂಜಿಂಗ್‍ ಸ್ಟಾರ್ ದರ್ಶನ್.

ಹೌದು. ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದ ದರ್ಶನ್ ಗೆ ಅಲ್ಲಿ ಸಚ್ಚಿದಾನಂದ ಶ್ರೀಗಳು ಗಿಣಿಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು.

ಕೆಂಪು ತಲೆಯ ಅಮೆಝೋನ್ ಜಾತಿಗೆ ಸೇರಿದ ಗಿಣಿಯನ್ನು ಶ್ರೀಗಳು ಆಶೀರ್ವಾದ ಪೂರ್ವಕವಾಗಿ ದರ್ಶನ್ ಗೆ ನೀಡಿದ್ದರು.

ಆಶ್ರಮದಲ್ಲಿರುವ ವಿವಿಧ ತಳಿಯ ಗಿಣಿಗಳನ್ನು ನೋಡಿ ದರ್ಶನ್ ಖುಷಿಪಟ್ಟಿದ್ದರು. ಈ ನಡುವೆ ಶ್ರೀಗಳು ಉಡುಗೊರೆಯನ್ನೂ ನೀಡಿ ದಚ್ಚುಗೆ ಆಶೀರ್ವದಿಸಿದ್ದರು.