Thursday, October 8, 2026

BDA Apartments

Home Front Page ಮೈಸೂರು: ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೀದಿಗೆ ಬಿದ್ದ ಕುಟುಂಬ

ಮೈಸೂರು: ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೀದಿಗೆ ಬಿದ್ದ ಕುಟುಂಬ

ಮೈಸೂರು,ಜುಲೈ,7,2026 (www.justkannada.in): ಖಾಸಗಿ ಫೈನಾನ್ಸ್ ಕಿರುಕುಳದಿಂದ ಬೀದಿಗೆ ಬಿದ್ದ ಕುಟುಂಬವು ನ್ಯಾಯಕ್ಕಾಗಿ ತಹಸೀಲ್ದಾರ್  ಮೊರೆ ಹೋದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮದ ರೇವಮ್ಮ ಎಂಬುವರ ಮನೆಗೆ ಫೈನಾನ್ಸ್ ಸಿಬ್ಬಂದಿ ಬೀಗ ಜಡಿದಿದ್ದು ಕಂಗಾಲಾದ ಕುಟುಂಬಸ್ಥರು ಇದೀಗ ನ್ಯಾಯ ಕೊಡಿಸಲು ತಹಶೀಲ್ದಾರ್   ಅವರಿಗೆ ಮನವಿ ಮಾಡಿದ್ದಾರೆ.ಮೈಸೂರು: ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೀದಿಗೆ ಬಿದ್ದ ಕುಟುಂಬ finance

ಎರಡು ವರ್ಷಗಳ ಹಿಂದೆ ‘ಇಕ್ವಿಟಿ ಸ್ಮಾಲ್ ಫೈನಾನ್ಸ್’  ನಲ್ಲಿ ರೇಖಾ ಹಾಗೂ ರೇವಮ್ಮ ಸಾಲ ಪಡೆದಿದ್ದರು. 3.15 ಲಕ್ಷ ಸಾಲ ಪಡೆದಿದ್ದು ಪ್ರತಿ ತಿಂಗಳು 7 ಸಾವಿರ ಕಂತು ಪಾವತಿ ಮಾಡುತ್ತಿದ್ದರು. ಆದರೆ  ಅನಾರೋಗ್ಯದ ನಿಮಿತ್ತ ಎರಡು ತಿಂಗಳು ಕಂತು ಕಟ್ಟಿಲ್ಲ. ಈ ಬಗ್ಗೆ ಫೈನಾನ್ಸ್ ಗೆ ತೆರಳಿ ಕುಟುಂಬ ಸಮಯಾವಕಾಶ ಕೇಳಿದ್ದು, ಆದರೂ ಸಹ  ಅತ್ತೆ ರೇವಮ್ಮ ಹಾಗೂ ಸೊಸೆ ಮನೆಯಲ್ಲಿ ಇಲ್ಲದ ವೇಳೆ  ಫೈನಾನ್ಸ್ ಸಿಬ್ಬಂದಿಗಳು ಮನೆಗೆ ಬೀಗ  ಜಡಿದು ನೋಟಿಸ್ ಅಂಟಿಸಿದ್ದಾರೆ. ಈ ಮೂಲಕ ಸರ್ಕಾರದ ಆದೇಶ ಗಾಳಿಗೆ ತೂರಿದ್ದಾರೆ.ಮೈಸೂರು jk02_new jk02 new

ಮನೆಗೆ ಬೀಗ ಜಡಿದ ಹಿನ್ನೆಲೆಯಲ್ಲಿ ರೇವಮ್ಮ ಕುಟುಂಬದವರಿಗೆ 15 ದಿನಗಳಿಂದ ಮನೆ ಮುಂದಿನ ಜಗುಲಿಯೇ ಆಶ್ರಯತಾಣವಾಗಿದ್ದು ಇದೀಗ ನ್ಯಾಯ ಸಿಗದಿದ್ದರೆ ವಿಷ ಕುಡಿಯುವ ಎಚ್ಚರಿಕೆ ನೀಡಿದ್ದಾರೆ.

Key words: Mysore , Family, finance, harassment, Justice