Monday, September 21, 2026

BDA Apartments

ಸಾ.ರಾ ಮಹೇಶ್ ಜತೆ ರಹಸ್ಯ ಮಾತುಕತೆ ಕುರಿತು ಸ್ಪಷ್ಟನೆ: ಬಿಎಸ್‌ ವೈ ಆಡಿಯೋ ಪ್ರಕ...
Home Front Page ಸಾ.ರಾ ಮಹೇಶ್ ಜತೆ ರಹಸ್ಯ ಮಾತುಕತೆ ಕುರಿತು ಸ್ಪಷ್ಟನೆ: ಬಿಎಸ್‌ ವೈ ಆಡಿಯೋ ಪ್ರಕರಣ ಕುರಿತು...

ಸಾ.ರಾ ಮಹೇಶ್ ಜತೆ ರಹಸ್ಯ ಮಾತುಕತೆ ಕುರಿತು ಸ್ಪಷ್ಟನೆ: ಬಿಎಸ್‌ ವೈ ಆಡಿಯೋ ಪ್ರಕರಣ ಕುರಿತು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…

ಮೈಸೂರು,ನ,8,2019(www.justkannada.in): ಅನರ್ಹ ಶಾಸಕರ ಕುರಿತು ಬಿಎಸ್‌ ವೈ ಆಡಿಯೋ ವಿಚಾರವಾಗಿ ರಾಷ್ಟ್ರಪತಿಗಳಿಗೆ ಕಾಂಗ್ರೆಸ್ ನಿಂದ ದೂರು ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ದೆಹಲಿ ಹೋಗೋಕೆ ಹೈಕಮಾಂಡ್ ನಿಂದ ಮಾಹಿತಿ ಬಂದಿದೆ. ರಾಷ್ಟ್ರಪತಿಗಳು ಸಮಯ ಕೊಟ್ಟ ತಕ್ಷಣ ಭೇಟಿ ಮಾಡ್ತಿವಿ ಎಂದು ಹೇಳೀಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್,  ಮೈಸೂರಿನಲ್ಲಿ ಇನ್ನು ಕೆಲ ಜಾಗಕ್ಕೆ ಭೇಟಿ ಮಾಡಬೇಕಿತ್ತು. ಸುತ್ತೂರು ಶ್ರೀಗಳನ್ನ ಭೇಟಿ ಮಾಡಬೇಕಿತ್ತು ಅವರು ಬಂದ ಮೇಲೆ ಭೇಟಿ ಮಾಡ್ತಿನಿ. ಮುಂದೆ ಬಂದಾಗ ಮತ್ತೆ ಭೇಟಿ ಮಾಡ್ತಿನಿ ಎಂದರು.

ಮಾಜಿ ಸಚಿವ ಸಾ.ರಾ ಮಹೇಶ್ ಜತೆ ರಹಸ್ಯ ಮಾತುಕತೆ ಕುರಿತು ಸ್ಪಷ್ಟನೆ ನೀಡಿದ ಡಿ.ಕೆ ಶಿವಕುಮಾರ್, ನಾನು ಸಾ.ರಾ.ಮಹೇಶ್ ಸ್ನೇಹಿತರು ಒಟ್ಟಿಗೆ ಕೆಲಸ ಮಾಡಿದ್ದೀವಿ. ಅದಕ್ಕೆ ಅವರನ್ನ ಭೇಟಿ ಮಾಡಿದೆ. ಅವರ ಕ್ಷೇತ್ರದಲ್ಲಿ ಅನುದಾನ ಕಡಿತ ಆಗಿದೆ ಅದನ್ನೆಲ್ಲ ಪಟ್ಟಿ ಮಾಡಿಸುತ್ತಿದ್ದೇನೆ. ಎಲ್ಲವನ್ನು ಪಟ್ಟಿ ಮಾಡಿಸಿ ಒಂದು ನಿರ್ಧಾರ ಮಾಡ್ತಿವಿ ಎಂದರು.

ಬಿಎಸ್‌ವೈ ಆಡಿಯೋ ವಿಚಾರವಾಗಿ ರಾಷ್ಟ್ರಪತಿಗಳಿಗೆ ಕಾಂಗ್ರೆಸ್ ನಿಂದ ದೂರು  ನೀಡಲು ದೆಹಲಿ ಹೋಗೋಕೆ ಹೈಕಮಾಂಡ್ ನಿಂದ ಮಾಹಿತಿ ಬಂದಿದೆ. ರಾಷ್ಟ್ರಪತಿಗಳು ಸಮಯ ಕೊಟ್ಟ ತಕ್ಷಣ ಭೇಟಿ ಮಾಡ್ತಿವಿ. ಸಿದ್ದರಾಮಯ್ಯನವರ ಹಾಗೂ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಹೋಗ್ತಿವಿ. ಕುಮಾರ‌ಸ್ವಾಮಿ, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರೆಲ್ಲ ಈ ಪ್ರಕರಣದ ಅರ್ಜಿದಾರರಾಗಿದ್ದಾರೆ. ಈ ಬಗ್ಗೆ ಏನಾಗಿದೆ ಅಂತ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಬಂದಿದ್ದು ನೋಡಿದ್ದಿನಿ. ದೆಹಲಿಗೆ ಹೋಗೋ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರಪತಿಗಳು ಸಮಯ ಕೊಟ್ಟರೆ ಹೋಗ್ತಿವಿ ಎಂದು ತಿಳಿಸಿದರು.

ಯಡ್ಯೂರಪ್ಪ ನೇರನುಡಿಯ ಮನುಷ್ಯ. ಅವರು ಹೇಳಿದ್ದಾರೆ ಆಡಿಯೋದಲ್ಲಿನ ಧ್ವನಿ ನನ್ನದೆ ಅಂತ. ಅವರು ಹಾಗೇಲ್ಲ ಯಾವುದೇ ವಿಚಾರ ಮಚ್ಚುಮರೆ ಮಾಡೋಲ್ಲ. ಧ್ವನಿ ನನ್ನದೆ ಅಂತ ಹೇಳಿದ್ದಾರೆ. ಆದ್ರೆ ಕೆಲ ಸಂದರ್ಭದಲ್ಲಿ ನೇರನುಡಿಯನ್ನ ವಾಪಸ್ ಪಡೆಯುತ್ತಿದ್ದಾರೆ‌. ಯಾಕಾಗಿ ಅವರು ಮಾತುಗಳನ್ನ ವಾಪಸ್ ಪಡೆಯುತ್ತಿದ್ದಾರೋ ನನಗೆ ಗೊತ್ತಿಲ್ಲ‌. ನೋಡೋಣ ಮುಂದೆ ಏನಾಗುತ್ತೆ ಅಂತ ಎಂದು ನುಡಿದರು.

ರಾಜಕಾರಣ ಬೇರೆ ಸ್ನೇಹ ಬೇರೆ. ಬಿಜೆಪಿಯ ಸಚಿವರು ಶಾಸಕರು ನನ್ನ ಜೊತೆ ಮಾತನಾಡಿದ್ದಾರೆ. ಎಲ್ಲರು ನನ್ನ ಸ್ನೇಹಿತರು. ಎಸ್.ಎಂ.ಕೃಷ್ಣ ನಮ್ಮ ಗುರುಗಳು. ಅವರು ಬೇರೆ ಪಾರ್ಟಿಯಲ್ಲಿದ್ದಾರೆ. ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದೆ. ಅದನ್ನೆಲ್ಲ ಮಾಧ್ಯಮದ ಮುಂದೆ ಹೇಳೋಕಾಗೋಲ್ಲ. ಹಾಗೇ ರಾಜಕಾರಣ ಬೇರೆ ವೈಯುಕ್ತಿಕ ಬೇರೆ. ನಮ್ಮ ಸಿದ್ದಾಂತ ನಮ್ಮ‌ ಜೊತೆ ಇರುತ್ತೆ ಎಂದು ತಿಳಿಸಿದರು.

ಇಡಿ ಮೇಲೆ ಕೆಂಡಕಾರಿ ಸಿಬಿಐ ಒಲವು ತೋರಿದ ಡಿಕೆ ಶಿವಕುಮಾರ್ , ಇಡಿ ಹೇಗೆ ಬೇಕಾದರೂ ಹೋಗಬಹುದು. ಆದ್ರೆ ಸಿಬಿಐ ಒಂದು ಜವಬ್ದಾರಿಯುತ ಸಂಸ್ಥೆ. ಅವರು ಕಾನೂನು ಪ್ರಕಾರನೇ ಹೋಗೋದು. ಸಿಬಿಐ ಒಂದು ಒಳ್ಳೆ ಸಂಸ್ಥೆ. ಅದನ್ನ ಹೇಗೆ ದುರುಪಯೋಗ ಮಾಡಿಕೊಳ್ತಾರೆ ಅನ್ನೋದರ ಬಗ್ಗೆ  ನಾನು ಮಾತನಾಡೋಲ್ಲ‌. ಆದ್ರೆ ಅವರು ಯಾರ ಮಾತು ಕೇಳೋಲ್ಲ. ಅವರೆಲ್ಲ ಒಂದು ನಿಯಮಾವಳಿ ಪ್ರಕಾರನೇ ಹೋಗೋದು. ನನಗೆ ನಂಬಿಕೆ ಇದೆ ಅವರು ಸಿಬಿಐನವರು ನಿಯಮ ಮೀರಿ ತನಿಖೆ ಮಾಡೋಲ್ಲ ಅಂತ. ತನಿಖೆ ಮಾಡಲಿ ಕಾನೂನು ಮೀರಿ ಏನು ಆಗಬಾರದು ಅನ್ನೋದು ನನ್ನ ಅಭಿಪ್ರಾಯ. ಅವರು ಕಾನೂನು ಮೀರಿ ಹೋಗೋಲ್ಲ ಅನ್ನೋ ನಂಬಿಕೆ ಇದೆ. ನಾನು ಸಿಬಿಐಗೆ ಉತ್ತರ ಕೊಡಲು ಸಿದ್ದನಿದ್ದೇನೆ. ಎಷ್ಟು ತನಿಖೆ ಆದರೂ ಆಗಲಿ. ನನ್ನ ಬಗ್ಗೆ ನನಗೆ ಸ್ಪಷ್ಟತೆ ಇರುವಾಗ ನನಗೆನು ಭಯ ಎಂದು ಪ್ರಶ್ನಿಸಿದರು.

Key words: mysore- dk shivakumar- bs yeddyurappa- audio case- reaction