Sunday, September 20, 2026

BDA Apartments

MYSORE DASARA : ಆರಂಭದಲ್ಲೇ ಎಡವಟ್ಟು BDA JK_Adv BDA Adv
Home Front Page MYSORE DASARA : ಆರಂಭದಲ್ಲೇ ಎಡವಟ್ಟು..

MYSORE DASARA : ಆರಂಭದಲ್ಲೇ ಎಡವಟ್ಟು..

Mysore-dasara-high-power-committee-meeting

 

ಬೆಂಗಳೂರು , ಜು.19, 2022 : (www.justkannada.in news) : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲೇ ಎಡವಟ್ಟು ಸಂಭವಿಸಿದೆ.

ಈ ವರ್ಷದ ದಸರಾ ಆಚರಣೆಗೆ ಸಬಂಧಿಸಿದಂತೆ ಇಂದು ಸಂಜೆ ವಿಧಾನಸೌಧದಲ್ಲಿ ಉನ್ನತಮಟ್ಟದ ಸಮಿತಿ ಸಭೆ ಕರೆಯಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯ ಈ ಹೈಪವರ್ ಕಮಿಟಿ ಮೀಟಿಂಗ್ ನಲ್ಲಿ ಸರಕಾರದ ಮುಖ್ಯಕಾರ್ಯದರ್ಶಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

ಆದರೆ ಅಹ್ವಾನ ಪತ್ರಿಕೆ ಮೇಲೆ, ಹೋದ ವರ್ಷದ ದಿನಾಂಕ (19-07-2021) ಮುದ್ರಿಸಲಾಗಿತ್ತು. ಈ ಎಡವಟ್ಟು ಗಮನಿಸಿದ ಸಭೆಯಲ್ಲಿ ಭಾಗವಹಿಸಿದ್ದವರು ಹಣೆ ಚಚ್ಚಿಕೊಳ್ಳುವಂತಾಯಿತು.

ಕೆಲ ದಿನಗಳ ಹಿಂದಷ್ಟೆ, ಸರಕಾರಿ ಕಚೇರಿಗಳಲ್ಲಿ ಕ್ಯಾಮೆರಾ, ವಿಡಿಯೋ ನಿರ್ಬಂಧಿಸಿ ಹೊರಡಿಸಿದ್ದ ಅದೇಶ ಹಿಂದಕ್ಕೆ ಪಡೆದು ಹೊಸದಾಗಿ ಮರು ಆದೇಶ ಹೊರಡಿಸಿದ್ದ ಸಂದರ್ಭದಲ್ಲೂ ಇಂಥದ್ದೆ ಎಡವಟ್ಟು ಕಂಡು ಬಂದಿತ್ತು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂಥದ್ದೆ ಎಡವಟ್ಟು ಜರುಗಿರುವುದು ವಿಪರ್ಯಾಸ.

key words : Mysore-dasara-high-power-committee-meeting