Thursday, September 24, 2026

BDA Apartments

Home DASARA-2019 ಮೈಸೂರು ದಸರಾ ಮಹೋತ್ಸವ ಹಿನ್ನೆಲೆ: ಬೆಳ್ಳಂಬೆಳಿಗ್ಗೆ ಅಧಿಕಾರಿಗಳ ಜತೆ ಸಚಿವ ವಿ.ಸೋಮಣ್ಣ ರೌಂಡ್ಸ್: ಕಾಮಗಾರಿ ವೀಕ್ಷಣೆ…

ಮೈಸೂರು ದಸರಾ ಮಹೋತ್ಸವ ಹಿನ್ನೆಲೆ: ಬೆಳ್ಳಂಬೆಳಿಗ್ಗೆ ಅಧಿಕಾರಿಗಳ ಜತೆ ಸಚಿವ ವಿ.ಸೋಮಣ್ಣ ರೌಂಡ್ಸ್: ಕಾಮಗಾರಿ ವೀಕ್ಷಣೆ…

ಮೈಸೂರು,ಸೆ,18,2019(www.justkannada.in):  ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು  ದಸರಾ  ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಸಿದ್ಧತಾ ಕಾರ್ಯ ನಡೆಯುತ್ತಿದೆ. ಈ ನಡುವೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮುಂಜಾನೆಯಿಂದಲೇ ನಗರದಲ್ಲಿ ರೌಂಡ್ಸ್ ಹಾಕಿ ಕಾಮಗಾರಿ ಪರಿಶೀಲನೆ ನಡೆಸಿದರು.

ದಸರಾ ಮಹೋತ್ಸವಕ್ಕೆ  ಹೆಚ್ಚಿನ ಪ್ರವಾಸಿಗರು ಆಗಮಿಸುವ ಹಿನ್ನೆಲೆ ಮೈಸೂರು- ಕೆ. ಆರ್. ಎಸ್ ರಸ್ತೆಯಲ್ಲಿನ ಒಂಟಿಕೊಪ್ಪಲ್  ರಸ್ತೆಯ ಬಳಿ ಸಚಿವ ವಿ. ಸೋಮಣ್ಣ  ಸ್ಥಳ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಪಡೆಯೊಂದಿಗೆ ರೌಂಡ್ಸ್ ಹಾಕಿ ಸಚಿವ ವಿ.ಸೋಮಣ್ಣ  ವಿವಿಧ ಕಾಮಗಾರಿಗಳನ್ನ ವೀಕ್ಷಿಸಿದರು.

ಸ್ವಚ್ಛತೆಯ  ದೃಷ್ಟಿಯಿಂದ ಹಾಗೂ  ಬರುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಕ್ರಮವಹಿಸುವ ಸಲುವಾಗಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸುತ್ತಿದ್ದಾರೆ ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸಿದರು. ಇದೇ  ವೇಳೆ ಜಿಲ್ಲಾ ಉಸ್ತುವಾರಿ ಸಚಿವರಿಗೆ  ಶಾಸಕ ಎಲ್. ನಾಗೇಂದ್ರ., ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್,  ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಹಾಗೂ ಮತ್ತಿತರರು ಸಾಥ್ ನೀಡಿದರು.

Key words: Mysore Dasara-  Minister -V Somanna -Rounds – Officers