ಮೈಸೂರಲ್ಲಿ ಕರೋನಾ ‘ ಯು ಟರ್ನ್ ‘ : ಹಸಿರು ವಲಯದತ್ತ ಮುಖ ಮಾಡಿದ್ದ ಜಿಲ್ಲೆ 18 ದಿನಗಳ ಬಳಿಕ ಮತ್ತೆ ಕೆಂಪು ವಲಯದತ್ತ..!

 

ಮೈಸೂರು, ಮೇ 18, 2020 : (www.justkannada.in news ) ಹದಿನೆಂಟು ದಿನಗಳ ಬಳಿಕ ಕರೋನಾ ಪಾಸಿಟಿವ್ ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ, ಹಸಿರು ವಲಯದತ್ತ ಹೆಜ್ಜೆ ಹಾಕಿದ್ದ ಮೈಸೂರು ಜಿಲ್ಲೆ ಇದೀಗ ಮತ್ತೆ ಕೆಂಪು ವಲಯಕ್ಕೆ ಹಿಂದಿರುಗುವಂತಾಗಿದೆ.

ಸೋಮವಾರ ಕರೋನಾ ಪಾಸಿಟಿವ್ ಪ್ರಕರಣ ಒಂದು ಪತ್ತೆಯಾಗಿರುವುದು ಸಾಂಸ್ಕೃತಿಕ ನಗರಿ ಜನರಲ್ಲಿ ಮತ್ತೆ ಆತಂಕ ಹೆಚ್ಚಿಸಿದೆ. ಹೊಸ ಪ್ರಕರಣ ದಾಖಲಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ ಜಿಲ್ಲೆಯ ಜನತೆಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ.

mysore-corona-positive-found-green.zone-to-red.zone-again-corona-u.turn

ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದ 623 ಜನ ಕ್ವಾರಂಟೈನ್ ನಲ್ಲಿದ್ದರು. ಈ ಪೈಕೆ ಒಬ್ಬನಿಗೆ ಕರೋನಾ ಸೊಂಕಿರುವುದನ್ನು ಜಿಲ್ಲಾಡಳಿತ ಸೋಮವಾರ ದೃಡ ಪಡಿಸಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರದ ಸಾಲಿಗ್ರಾಮದ 46 ವರ್ಷದ ವ್ಯಕ್ತಿಗೆ ಸೊಂಕು ದೃಢ. ಈತ ಮಹಾರಾಷ್ಟ್ರದ ಮುಂಬೈನಿಂದ ಕಳೆದ ವಾರವಷ್ಟೆ ಮೈಸೂರು ಜಿಲ್ಲೆಗೆ ಆಗಮಿಸಿ ಕ್ವಾರಂಟೈನ್ ನಲ್ಲಿದ್ದ.

ಕೆಂಪು ವಲಯದಿಂದ ಹಸಿರು ವಲಯದತ್ತ ಮೈಸೂರು ಜಿಲ್ಲೆ ಸಾಗುತ್ತಿದೆ ಎಂದು ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತಿದ್ದರು. ಇದೀಗ ಪಾಸಿಟಿವ್ ಧೃಢಪಟ್ಟಿರುವುದು ಇಂಥ ಜನರಿಗೆ ಎಚ್ಚರಿಕೆ ಎಂದೇ ಭಾವಿಸಲಾಗಿದೆ,

ಹೊಸ ಪ್ರಕರಣ ದಾಖಲಾಗುತ್ತಿದ್ದಂತೆ ಮತ್ತೆ ಕಟ್ಟುನಿಟ್ಟಿನ ಕ್ರಮಕ್ಕೆ ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

key words : mysore-corona-positive-found-green.zone-to-red.zone-again-corona-u.turn