ಕರ್ನಾಟಕದಲ್ಲಿ ನಾಳೆಯಿಂದ ಬಸ್, ಆಟೋ ಸಂಚಾರ ಪುನಾರಂಭ

ಬೆಂಗಳೂರು, ಮೇ 18, 2020 (www.justkannada.in): ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ 54 ದಿನಗಳಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ನಾಳೆಯಿಂದ ಪುನರಾರಂಭಗೊಳ್ಳಲಿದೆ.

ನಿಯಮ ಪಾಲನೆ ಕಡ್ಡಾಯ. ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಖಾಸಗಿ ಬಸ್ ಹಾಗೂ ಟ್ಯಾಕ್ಸಿ, ಆಟೋ ಸಂಚಾರಕ್ಕೂ ಸರ್ಕಾರ ಅನುಮತಿ ನೀಡಿದೆ.

ಸಾರಿಗೆ ಸೇವೆ, ಅಂಗಡಿ-ಮುಂಗಟ್ಟು ಹಾಗೂ ಜನಸಂಚಾರಕ್ಕೆ ಅವಕಾಶ ಕೊಟ್ಟಿರುವ ಸರ್ಕಾರ ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಾಡಿದೆ.

ಬಸ್‍ನಲ್ಲಿ ಕೇವಲ 30 ಪ್ರಯಾಣಿಕರು ಸಂಚರಿಸಲು ಮಾತ್ರ ಅನುಮತಿ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಬಸ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಮಾರ್ಗಸೂಚಿ ಕುರಿತಂತೆ ಸಚಿವ ಸಂಪುಟದ ಸಹೋದ್ಯೋಗಿಗಳಿಂದ ಸಲಹೆ-ಸೂಚನೆ ಪಡೆದ ನಂತರ ಸುದ್ದಿಗೋಷ್ಠಿಯಲ್ಲಿಂದು ಮುಖ್ಯಮಂತ್ರಿಗಳು ರಾಜ್ಯಸರ್ಕಾರದ ಮಾರ್ಗಸೂಚಿ ಪ್ರಕಟಿಸಿದರು.