ಗ್ರೀನ್ ಝೋನ್ ಕೊಡಗಿಗೆ ಮತ್ತೆ ಬಂದ ಕೊರೊನಾ

ಮಡಿಕೇರಿ, ಮೇ 18, 2020 (www.justkannada.in): ಗ್ರೀನ್ ಝೋನ್ ಕೊಡಗಿಗೂ ಮತ್ತೆ   ಕೊರೊನಾ ಒಕ್ಕರಿಸಿದೆ.

ಬಾಂಬೆಯಿಂದ ಬಂದ ಮಹಿಳೆಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಮುಂಬೈನಿಂದ ಮಂಗಳೂರು ಮೂಲಕ ಕೊಡಗಿಗೆ ಬಂದಿದ್ದ ಮಹಿಳೆಗೆ ಸೋಂಕು ಕಂಡು ಬಂದಿದೆ.

ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಇದ್ದ ಮಹಿಳೆಗೆ ಇಂದು ಪಾಸಿಟಿವ್ ದೃಢಪಟ್ಟಿದೆ.

ಕಳೆದ 60 ದಿನಗಳಿಂದ ಕೋರೋನ ಮುಕ್ತವಾಗಿತ್ತು ಕೊಡಗು. ಸೋಂಕು ತಗುಲಿದ ಮಹಿಳೆ ನೇರವಾಗಿ ಆಸ್ಪತ್ರಗೆ ದಾಖಲಾಗಿದ್ದ ಹಿನ್ನಲೆ ಇತರರಿಗೆ ಸೋಂಕು ತಗುಲಿರುವ ಸಾಧ್ಯತೆ ಕಡಮೆ ಎನ್ನಲಾಗಿದೆ.