ರೈತರ ಆದಾಯ ವೃದ್ಧಿಗೆ ನಿರ್ದೇಶನಾಲಯ : ಮುಖ್ಯಮಂತ್ರಿ ಬೊಮ್ಮಾಯಿ ಮೈಸೂರಲ್ಲಿ ಹೇಳಿಕೆ.

Mysore-cm-basavaraja-bommaiha-former's-meet-felicitation

 

ಮೈಸೂರು, ಡಿ.26, 2021 : (www.justkannada.in news ) ರೈತರ ಆದಾಯ ವೃದ್ಧಿಸಲು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆಗೆ ರಾಜ್ಯ ಸರಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯೊ ಪ್ರಕಟಿಸಿದರು.

ನಗರದ ಕಲಾಮಂದಿರದಲ್ಲಿ ಇಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆಯ ರಾಜ್ಯಮಟ್ಟದ ಸಮಾವೇಶ ಹಾಗೂ ಕುರುಬೂರು ಶಾಂತಕುಮಾರ ಅವರಿಗೆ 40 ವರ್ಷಗಳ ಹೋರಾಟಕ್ಕೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಸಿಎಂ ಬೊಮ್ಮಾಯಿ ಮಾತನಾಡಿ ಹೇಳಿದಿಷ್ಟು…

ಕೃಷಿ ಮತ್ತು ಕಲ್ಯಾಣ ಇಲಾಖೆ, ರೈತರ ಆದಾಯ ದ್ವಿಗುಣ ಸಮಿತಿ ಮುಖ್ಯಸ್ಥರಾದ ಅಶೋಕ್ ದಳವಾಯಿ ಅವರು 3 ಸಾವಿರ ಪುಟದ ವರದಿ ನೀಡಿದ್ದಾರೆ. ಇದನ್ನು ಪರಿಶೀಲಿಸಿ ರೈತರ ಆದಾಯ ದ್ವಿಗುಣಗೊಳ್ಳಲು ನಿರ್ದೇಶನಾಲಯವನ್ನು ನಮ್ಮ ಸರಕಾರ ಜಾರಿಗೊಳಿಸಲಿದೆ.

ರೈತರ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಅನುಕೂಲವಾಗಲೆಂಬ ಉದ್ದೇಶದಿಂದ ‘ವಿದ್ಯಾನಿಧಿ’ ಯೋಜನೆ ಜಾರಿಗೆ ತರಲಾಗಿದೆ. ಸದ್ಯ 2.40 ಲಕ್ಷ ರೈತರ ಮಕ್ಕಳಿಗೆ ಯೋಜನೆ ಲಾಭ ಸಿಗುತ್ತಿದೆ. ಮಾರ್ಚ್ ವೇಳೆಗೆ ಈ ಸಂಖ್ಯೆ 5 ಲಕ್ಷ ತಲುಪುವ ವಿಶ್ವಾಸವಿದೆ.

ಯೋಜನೆಯನ್ನು ಗ್ರಾಮೀಣ ಭಾಗದ ಹೈಸ್ಕೂಲ್ ಹೆಣ್ಣುಮಕ್ಕಳಿಗೂ ವಿಸ್ತರಿಸಲಾಗುತ್ತದೆ.

ರೈತರಿಗೆ ಸಾಲ ಸೌಲಭ್ಯ ನೀಡುವಲ್ಲಿಯೂ ಸಮಸ್ಯೆ ಉಂಟಾಗುತ್ತಿದೆ. ಒಂದು ಎಕರೆ ಇರುವವರಿಗೆ ಕಡಿಮೆ ಸಾಲ ಹಾಗೂ ಹೆಚ್ಚು ಎಕರೆ ಇರುವವರಿಗೆ ಹೆಚ್ಚು ಸಾಲ ಸಿಗುತ್ತದೆ. ಇದು ತಪ್ಪಬೇಕು. ಈ ಬಗ್ಗೆಯೂ ನಮ್ಮ ಸರಕಾರ ಗಮನ ಹರಿಸಿ ರೈತರಿಗೆ ಅನುಕೂಲವಾಗುವ ಕೆಲಸ ಮಾಡಲಿದೆ.

ಸದ್ಯ 12 ಲಕ್ಷಗಿಂತ ಹೆಚ್ಚು ಬೆಳೆ ಪೈರು ಈ ಬಾರಿಯ ಅಕಾಲಿಕ ಮಳೆಯಿಂದ ನಾಶಗೊಂಡಿದೆ. ಮೊದಲೆಲ್ಲಾ 6 ತಿಂಗಳಾದರೂ ಬೆಳೆನಷ್ಟ ಅನುಭವಿಸಿದ ರೈತರಿಗೆ ಸಾಲ ಸಲವತ್ತು ಸಿಗುತ್ತಿರಲಿಲ್ಲ . ಇದೀಗ ಕೇವಲ ಒಂದು ತಿಂಗಳಲ್ಲಿ ಬೆಳೆಪರಿಹಾರ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 800 ಕೋಟಿ ಪರಿಹಾರ ನೀಡಲಾಗಿದೆ.

ಇದೇ ವೇಳೆ ಕುರುಬೂರು ಶಾಂತಕುಮಾರ್ ಹಾಗೂ ಅವರ ಪತ್ನಿ ಪದ್ಮ ಅವರನ್ನು ಸನ್ಮಾನಿಸಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಕನ್ನಡ ಪ್ರಭ ಸಂಪಾದಕ ರವಿ ಹೆಗ್ದೆ ಸೇರಿದಂತೆ ಇತರರು ಇದ್ದರು.

key words : Mysore-cm-basavaraja-bommaiha-former’s-meet-felicitation