Saturday, August 22, 2026

BDA Apartments

Home Cinema ಬಡಪಾಯಿ ಸಪ್ಲೈಯರ್ ದರ್ಶನ್ ಹಲ್ಲೆ, ಸೆಟ್ಲ್’ಮೆಂಟ್ ಕೇಂದ್ರವಾದ ಪೊಲೀಸ್ ಠಾಣೆ: ಇಂದ್ರಜಿತ್ ಲಂಕೇಶ್ ಆರೋಪ

ಬಡಪಾಯಿ ಸಪ್ಲೈಯರ್ ದರ್ಶನ್ ಹಲ್ಲೆ, ಸೆಟ್ಲ್’ಮೆಂಟ್ ಕೇಂದ್ರವಾದ ಪೊಲೀಸ್ ಠಾಣೆ: ಇಂದ್ರಜಿತ್ ಲಂಕೇಶ್ ಆರೋಪ

ಬೆಂಗಳೂರು, ಜುಲೈ 15, 2021 (www.justkannada.in): ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ನಟ ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸ್ಟಾರ್ ಹೋಟೆಲ್ ನಲ್ಲಿ ಒಬ್ಬ ಬಡಪಾಯಿ ಸಪ್ಲೈಯರ್ ಮೇಲೆ ಹಲ್ಲೆ ನಡೆದಿದೆ ಎಂದು ಇಂದ್ರಜಿತ್ ಲಂಕೇಶ್ ದೂರಿದ್ದಾರೆ.

ಸಂತ್ರಸ್ತನ ಪತ್ನಿ ಪೊಲೀಸರಿಗೆ ದೂರು ನೀಡಲು ಹೊರಟಾಗ ಇದೇ ದರ್ಶನ್ ಮತ್ತು ಸ್ನೇಹಿತರು ಎಲ್ಲವನ್ನೂ ಸೆಟ್ಲ್ ಮೆಂಟ್ ಮಾಡುತ್ತಾರೆ ಎಂದು ದೂರಿದ್ದಾರೆ.

ಮೈಸೂರಿನ ಪೊಲೀಸ್ ಠಾಣೆ ಈಗ ಸೆಟ್ಲ್ ಮೆಂಟ್ ಕೇಂದ್ರವಾಗಿ ಬದಲಾಗಿದೆ. ಇದೆಲ್ಲವನ್ನೂ ನಾನು ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ಇಂದ್ರಜಿತ್ ಆರೋಪಿಸಿದ್ದಾರೆ.