ಡಿಕೆ ಶಿವಕುಮಾರ್ ಬಂಡವಾಳ ನಾನು ಬಿಚ್ಚಿಡಬಹುದು: ಅಂಥಾ ಕೆಲಸ ಮಾಡಲ್ಲ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ.

ಹಾಸನ,ಏಪ್ರಿಲ್,16,2024 (www.justkannada.in):  ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್  ಮತ್ತು ಬಿಜೆಪಿ, ಜೆಡಿಎಸ್ ನಡುವೆ ವಾಕ್ಸಮರ ಆರೋಪ ಪ್ರತ್ಯಾರೋಪ ಮುಂದುವರೆದಿದ್ದು ಈ ನಡುವೆ ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಗುಡುಗಿದ್ದಾರೆ.

ಹಾಸನದಲ್ಲಿ ಇಂದು ಮಾತನಾಡಿದ ಹೆಚ್.ಡಿ ದೇವೇಗೌಡರು, ಡಿಸಿಎಂ ಡಿ.ಕೆ ಶಿವಕುಮಾರ್ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.  ಡಿಕೆ ಶಿವಕುಮಾರ್  ಬಂಡವಾಳ ನಾನು ಬಿಚ್ಚಿಡಬಹುದು. ಆದರೆ ಈ ವಯಸ್ಸಿನಲ್ಲಿ ಅಂತಾ ಕೆಲಸ ಮಾಡಲ್ಲ ಎಂದರು.

ಮಹಿಳೆಯರ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿ ಹೇಳಿಕೆಯನ್ನ ತಿರುಚಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಈಗಾಗಲೇ ಬೇಷರತ್ ಕ್ಷಮೆಯಾಚಿಸಿದ್ದಾರೆ. ಹೆಚ್ ಡಿಕೆ  ಹೆಂಗಸರಿಗೆ ತುಂಬಾ ಬೆಲೆ ಕೊಡುತ್ತಾರೆ ಎಂದರು.

Key words: DK Shivakumar , Former PM, HD Deve Gowda