ಮೈಸೂರು ನಗರ ಪಾಲಿಕೆ ಮಹತ್ವದ ಹೆಜ್ಜೆ : ಈ ಕ್ರಮ ಆಳವಡಿಸಿಕೊಂಡ್ರೆ ನಿಮಗೆ ಸಿಗಲಿದೆ ನೀರಿನ ದರದಲ್ಲಿ ವಿನಾಯಿತಿ….

ಮೈಸೂರು,ಜನವರಿ,23,2021(www.justkannada.in): ಮಳೆನೀರು ಕೊಯ್ಲು ಯೋಜನೆಯನ್ನ ಪ್ರೋತ್ಸಾಹಿಸಲು ಮೈಸೂರು ಮಹಾನಗರ ಪಾಲಿಕೆ  ಮಹತ್ವದ ಹೆಜ್ಜೆ ಇಟ್ಟಿದೆ.jk

ಹೌದು,  ಮಳೆನೀರು ಕೊಯ್ಲು ಅಳವಡಿಸಿಕೊಂಡವರಿಗೆ ನೀರಿನ ದರದಲ್ಲಿ ವಿನಾಯಿತಿ ಪಡೆಯಲು ಮೈಸೂರು ಮಹಾನಗರ ಪಾಲಿಕೆ ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಪಾಲಿಕೆ ಸಾರ್ವಜನಿಕರಿಗೆ ಅರ್ಜಿ ಬಿಡುಗಡೆ ಮಾಡಿದ್ದು, ಮಳೆನೀರು ಕೊಯ್ಲು ಅಳವಡಿಸಿಕೊಂಡು ಪಾಲಿಕೆಯ ನಿಯಮಾನುಸಾರ ಪರಿಶೀಲನೆ ಬಳಿಕ ನೀರಿನ ದರದಲ್ಲಿ ವಿನಾಯಿತಿ ನೀಡಲು ಮುಂದಾಗಿದೆ.

ಅರ್ಜಿಯಲ್ಲಿ ವಿಳಾಸ ಹಾಗೂ ಯಾವ ಮಾದರಿಯ ಮನೆ, ಈಗಾಗಲೇ ಸುಂಕ ನೀಡುತ್ತಿರುವ ವಿವರ, ವಾರ್ಡ್ ಸಂಖ್ಯೆ ಹಾಗೂ ದೂರವಾಣಿ ಸಂಖ್ಯೆಯನ್ನ ನಮೂದಿಸಿ ಅರ್ಜಿ ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಯನ್ನ ಪರಿಗಣಿಸಿ ಹಾಗೂ ಸ್ಥಳ ಪರಿಶೀಲನೆ ಮಾಡಿದ ಬಳಿಕ ಮೈಸೂರು ಮಹಾನಗರ ಪಾಲಿಕೆ ನೀರಿನ ದರದಲ್ಲಿ ವಿನಾಯಿತಿ ನೀಡಲಿದೆ. Mysore City corporation- water- deduction- Rainwater harvesting

ಇದೀಗ ಮೈಸೂರು ಮಹಾನಗರ ಪಾಲಿಕೆಯ ಮಹತ್ವದ ನಡೆಗೆ ಸಾಮಾಜಿಕ ಜಾಲತಾಣ ಹಾಗೂ ಮೈಸೂರಿನ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

Key words: Mysore City corporation- water- deduction- Rainwater harvesting