ಮೈಸೂರಲ್ಲಿ ಭೂ ಮಾಫಿಯಾ ಸಕ್ರಿಯ : ರೋಹಿಣಿ ಸಿಂಧೂರಿ ಆರೋಪ

ಮೈಸೂರು, ಜೂ.09, 2021 : (www.justkannada.in news) ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹಾಗೂ ಸಾ.ರಾ.ಮಹೇಶ್ ಪಾಲುದಾರಿಕೆಯಲ್ಲಿ ಭೂ ಮಾಫಿಯಾ ಸಕ್ರಿಯವಾಗಿದೆ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಆರೋಪಿಸಿದರು.

jk

ಈ ಬಗ್ಗೆ ಹೇಳಿಕೆ ನೀಡಿರುವ ರೋಹಿಣಿ ಸಿಂಧೂರಿ,  ಈ ‘ಭೂ ಮಾಫಿಯಾದವರು ಸೇರಿ ನನ್ನನ್ನು ವರ್ಗಾವಣೆ ಮಾಡಿಸಿದರು. ವರ್ಗಾವಣೆಯಾದ ಮೇಲೂ ನನ್ನ ಮೇಲೆ ಮುಗಿಬೀಳುತ್ತಿದ್ದಾರೆ. ತನಿಖೆ ನಡೆಯಬಹುದು ಎಂದು ಭಯ ಪಡುತ್ತಿದ್ದಾರೆ. ಆದ್ದರಿಂದಲೇ ನನ್ನ ವಿರುದ್ದ ಸಾ.ರಾ.ಮಹೇಶ್ ಮುಗಿಬಿದ್ದದ್ದು ಎಂದಿದ್ದಾರೆ.

Rohini Sindhuri - sworn –power -new DC- Mysore

‘ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹಾಗೂ ಶಾಸಕ ಸಾ.ರಾ.ಮಹೇಶ್ ಪಾಲುದಾರಿಕೆಯಲ್ಲಿ ಭೂ ಮಾಫಿಯಾ ಈಗಲೂ ಸಕ್ರಿಯವಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವ ಹಕ್ಕು, ಅಧಿಕಾರ ಜಿಲ್ಲಾಧಿಕಾರಿಗೆ ಇರುತ್ತದೆ. ಹಾಗಾಗಿ ನಾನ್ಯಾಕೆ ರಾಜ್ಯಪಾಲರಿಗೆ ಪತ್ರ ಬರೆಯಲಿ ಎಂದು ಪ್ರಶ್ನಿಸುವ ಮೂಲಕ ರೋಹಿಣಿ ಸಿಂಧೂರಿ, ಶಾಸಕ ಸಾ.ರ.ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದರು.

key words : mysore-dc-rohini-sindhoori-sa.ra.mahesh_land-grabber-mafia