ಬೆಳ್ಳಂಬೆಳಿಗ್ಗೆ ಅಂಬಾರಿ ಬಸ್ ಟ್ರಯಲ್ ರನ್ : ಶೀಘ್ರದಲ್ಲೇ ಪ್ರವಾಸಿಗರಿಗೆ ಮೈಸೂರು ಅಂದ ಸವಿಯುವ ಅವಕಾಶ…..

 

ಮೈಸೂರು,ಜನವರಿ,23,2021(www.justkannada.in): ಪ್ರವಾಸಿಗರನ್ನು ಸೆಳೆಯಲು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂಬಾರಿ (ಡಬಲ್ ಡೆಕ್ಕರ್) ಬಸ್ ಸಂಚಾರ ಆರಂಭಿಸಲು ಪ್ರವಾಸೋದ್ಯಮ ಇಲಾಖೆಯಿಂದ  ಸಿದ್ಧತೆ ನಡೆಸುತ್ತಿದ್ದು, ಶೀಘ್ರದಲ್ಲೇ ಪ್ರವಾಸಿಗರಿಗೆ ಮೈಸೂರು ಅಂದ ಸವಿಯುವ ಅವಕಾಶ ಸಿಗಲಿದೆ.jk

ಹೌದು ಇಂದು ಮೈಸೂರಿನಲ್ಲಿ  ಬೆಳ್ಳಂಬೆಳಿಗ್ಗೆ ಅಂಬಾರಿ ಬಸ್ ಟ್ರಯಲ್ ರನ್ ಮಾಡಲಾಯಿತು. ನಗರದ ಮೆಟ್ರೊಪೋಲ್  ವೃತ್ತದಿಂದ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ಕುಕ್ಕರಹಳ್ಳಿ ಕೆರೆ, ಕೃಷ್ಣರಾಜ ಬುಲೇವಾರ್ಡ್ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ಮತ್ತೆ ಮೆಟ್ರೋಫೋಲ್ ಸರ್ಕಲ್ ಅನ್ನ ಅಂಬಾರಿ ಬಸ್ ತಲುಪಿತು.ambari-bus-trail-run-mysore-tourists-soon-kstdc-officers

ಕೆಎಸ್ ಟಿ ಡಿಸಿ ಅಧಿಕಾರಿಗಳು ಇಂದು ಅಂಬಾರಿ ಟ್ರಯಲ್ ರನ್ ನಡೆಸಿ ರೂಟ್ ಫ್ಲಾನ್ ರೆಡಿ ಮಾಡಿದ್ದು, ಬಸ್ ಸಂಚಾರದ ವೇಳೆ ಆಗುವ ಅಡಚಣೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇನ್ನು ಟ್ರಯಲ್ ರನ್ ಯಶಸ್ವಿಯಾದ ನಂತರ ಅಂಬಾರಿ ಬಸ್ ರಸ್ತೆಗಿಳಿಯಲಿದ್ದು, ಈ ಮೂಲಕ ಪ್ರವಾಸಿಗರು ಅಂಬಾರಿ ಬಸ್ ನಲ್ಲಿ ಕುಳತು ಮೈಸೂರಿನ ಸೌಂದರ್ಯದ ಸೊಬಗನ್ನ ಸವಿಯುವ ಅವಕಾಶ ಶೀಘ್ರದಲ್ಲೇ ದೊರೆಯಲಿದೆ.

Key words: Ambari Bus- Trail Run -Mysore – tourists- soon- KSTDC- Officers.