ಕೋವಿಡ್ ನಿಯಂತ್ರಣಕ್ಕೆ ಕ್ರಮ: ಮೈಸೂರಿನಲ್ಲಿ 144 ಸೆಕ್ಷನ್ ಜಾರಿ…

ಮೈಸೂರು,ಏಪ್ರಿಲ್,22,2021(www.justkannada.in):  ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಪ್ರಮಾಣವನ್ನ ತಗ್ಗಿಸಲು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ವಿಕೇಂಡ್ ಕರ್ಫ್ಯೂನಂತಹ ಕ್ರಮ ಕೈಗೊಂಡಿದೆ. ಈ ನಡುವೆ ಕೋವಿಡ್ ನಿಯಂತ್ರಣಕ್ಕೆ  ಮೈಸೂರು ಜಿಲ್ಲೆಯಲ್ಲೂ ಕಠಿಣ ಕ್ರಮ ಕೈಗೊಳ್ಳಲಾಗಿದೆ.jk

ಹೌದು ಕೊರೋನಾ ಹಿನ್ನೆಲೆ ಮೇ 4 ವರೆಗೆ 144 ಸೆಕ್ಷನ್ ಜಾರಿಗೊಳಿಸಿ ಮೈಸೂರು ನಗರ ಪೋಲಿಸ್ ಆಯುಕ್ತ ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ನಿನ್ನೆ ರಾತ್ರಿಯಿಂದಲೆ 144 ಸೆಕ್ಷನ್ ಜಾರಿ ಮಾಡಲಾಗಿದ್ದು  ಮೇ 4 ರ ಬೆಳಗ್ಗೆ 6 ವರೆಗೆ  144 ಸೆಕ್ಷನ್ ಜಾರಿಯಲ್ಲಿರುತ್ತದೆ.mysore- covid –control-Section 144 - Police Commissioner -chandragupta

ಸಾರ್ವಜನಿಕವಾಗಿ 5 ಕ್ಕಿಂತ ಹೆಚ್ಚು ಜನ ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ದಿನ‌ನಿತ್ಯದ ವಸ್ತುಗಳೂ ಸೇರಿದಂತೆ ವ್ಯಾಪಾರಿ ಸ್ಥಳಗಳಲ್ಲಿ ನಿಯಮ ಉಲ್ಲಂಘನೆ ಮಾಡಬಾರದು. ನಿಯಮ ಉಲ್ಲಂಘನೆ ಆದ್ರೆ ಅಂಗಡಿ ಮಾಲೀಕರೇ ಜವಾಬ್ದಾರರಾಗಿರುತ್ತಾರೆ. ನಿಯಮ ಉಲ್ಲಂಘಿಸಿದರೇ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪೋಲೀಸರು ಕೇಸು ದಾಖಲಿಸಲಿದ್ದಾರೆ.

Key words: mysore- covid –control-Section 144 – Police Commissioner -chandragupta