ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಅಕ್ರಮವಾಗಿ ಸಾಗಿಸುತ್ತಿದ್ದ7 ಲಕ್ಷ  ರೂ.ಬೆಲೆ ಬಾಳುವ ಬಿಯರ್ ಸೀಜ್.

ಮೈಸೂರು ,ಮಾರ್ಚ್,25,2024(www.justkannada.in): ಚುನಾವಣಾಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ 7 ಲಕ್ಷ ಬೆಲೆ ಬಾಳುವ ಬಿಯರ್ ಬಾಟಲ್ ಗಳನ್ನ ಸೀಜ್ ಮಾಡಿದ್ದಾರೆ.

ನಂಜನಗೂಡು ತಾಲ್ಲೂಕಿನಲ್ಲಿ ಅಬಕಾರಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಬರೋಬ್ಬರಿ 7 ಲಕ್ಷ ರೂ. ಮೌಲ್ಯದ  3988 ಲೀಟರ್ ಬಿಯರ್ ಹಾಗೂ 78 ಲೀಟರ್ ಐಎಂಎಲ್ ಮದ್ಯ ಜಪ್ತಿ ಮಾಡಿದ್ದಾರೆ. ಚೆಕ್ ಪೋಸ್ಟ್ ಸೇರಿ ಮದ್ಯದ ಅಂಗಡಿಗಳ ಗೋಡನ್ ಗಳಲ್ಲಿ ಬಿಯರ್ ಅನ್ನು ಅನಧಿಕೃತವಾಗಿ ಶೇಖರಿಸಿಟ್ಟಿದ್ದರು.

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಹಿನ್ನಲೆ, ಚುನಾವಣಾಧಿಕಾರಿಗಳ ಆದೇಶದ ಮೇರೆಗೆ ಅಬಕಾರಿ ಇಲಾಖೆಯಿಂದ  ಇನ್ಸ್ ಪೆಕ್ಟರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ನಂಜನಗೂಡು ಪಟ್ಟಣದಲ್ಲಿ 5 ಕಡೆ ದಾಳಿ ನಡೆಸಲಾಗಿತ್ತು. 6 ಜನರ ಮೇಲೆ ಅಬಕಾರಿ ಮತ್ತು ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದ್ದು  ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.  ವಶಕ್ಕೆ ಪಡೆದುಕೊಂಡಿರುವ ಮದ್ಯವನ್ನು ಆಧರಿಸಿ ಈಗಾಗಲೇ ಮೌಲ್ಯವನ್ನು ಗುರುತಿಸಲಾಗಿದೆ. ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Key words: mysore-Big operation – Election Officers-Illegally – beer – seized.