ಕಿರುತೆರೆಗೆ ‘ಸೂಪರ್ ಸ್ಟಾರ್’ ಜೆಕೆ ರೀ ಎಂಟ್ರಿ

ಬೆಂಗಳೂರು, ಜುಲೈ 16, 2019 (www.justkannada.in): ಬಹಳ ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಸೂಪರ್ ಸ್ಟಾರ್ ಜೆಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ಕೆಂಪೇಗೌಡ, ವಿಷ್ಣುವರ್ಧನ, ಜರಾಸಂಧ, ಫೈಟರ್ , ವರದನಾಯಕ ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಪ್ರತಿಭೆ ಜೆಕೆ ಮತ್ತೆ ಕಿರುತೆರೆಗೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಂಪನಿ ರಿಯಾಲಿಟಿ ಶೋನಲ್ಲಿ ಜೆಕೆ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಜೆಕೆ ಇದೀಗ ಕಾಮಿಡಿ ಕಂಪನಿ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಮರಳಿ ಬಂದಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.