ಸಿಎಂ ಹೆಚ್.ಡಿ ಕುಮಾರಸ್ವಾಮಿ ಒಂದು ರೀತಿ ಕ್ರಿಮಿನಲ್ ಆಗಿದ್ದಾರೆ- ಬಿಜೆಪಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ…

ಬೆಂಗಳೂರು,ಜು,16,2019(www.justkannada.in):  ಅಧಿಕಾರ ಉಳಿಸಿಕೊಳ್ಳಲು ಸಿಎಂ ಹೆಚ್.ಡಿ ಕುಮಾರಸ್ವಾಮಿ ಶಾಸಕರನ್ನ ಬಂಧಿಸುತ್ತಿದ್ದಾರೆ. ಅವರು ಒಂದು ರೀತಿಯ ಕ್ರಿಮಿನಲ್ ಆಗಿದ್ದಾರೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಶಾಸಕ ರೇಣುಕಾಚಾರ್ಯ, ಬಹುಮತ ಸಾಬೀತು ಪಡಿಸುವ ಸಲುವಾಗಿ ಶಾಸಕರನ್ನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಂಧಿಸುತ್ತಿದ್ದಾರೆ. ಕುಮಾರಸ್ವಾಮಿಯವರೇ ಇದು ವಾಮಮಾರ್ಗ. ನೀವು ತನಿಖೆ ಮಾಡಿಸಿ ಬೇಡ ಅನ್ನಲ್ಲ. ಆದರೆ ಎಸ್ ಐಟಿಯನ್ನ ಅಸ್ತ್ರವನ್ನಾಗಿಸಿಕೊಳ್ಳಬೇಡಿ ಎಂದು  ಎಂದು ಮನವಿ ಮಾಡಿದರು.

ಸಿಎಂ ಹೆಚ್.ಡಿ ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳಲು ವಾಮಮಾರ್ಗ ಅನುಸರಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಕ್ರಿಮಿನಲ್ ಆಗಿದ್ದಾರೆ ಎಂದು ರೇಣುಕಾಚಾರ್ಯ ಗುಡುಗಿದರು.

Key words: CM HD Kumaraswamy – criminal- BJP MLA -Renukacharya