ನಟಿ ಸಮೀರಾ ರೆಡ್ಡಿ ಮನೆಗೆ ಬಂದ ‘ಲಿಟ್ಲ್ ಏಂಜೆಲ್’ !

ಬೆಂಗಳೂರು, ಜುಲೈ 16, 2019 (www.justkannada.in): ಅಂಡರ್ ವಾಟರ್ ಪ್ರೆಗ್ನೆಸ್ಸಿ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದ ನಟಿ ಸಮೀರಾ ರೆಡ್ಡಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕಳೆದ ಶುಕ್ರವಾರ ಸಮೀರಾ ರೆಡ್ಡಿ ಮಗಳು ಹುಟ್ಟಿದ್ದು, ನಿನ್ನೆ ಮುದ್ದು ಕಂದನ ಫೋಟೋವನ್ನು ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಮೀರಾ ರೆಡ್ಡಿ ಶೇರ್ ಮಾಡಿದ್ದಾರೆ.

ಮುದ್ದು ಮಗಳ ಬಗ್ಗೆ ಬರೆದುಕೊಂಡಿರುವ ಸಮೀರಾ ರೆಡ್ಡಿ ”ನಮ್ಮ ಮನೆಗೆ ಏಂಜೆಲ್ ಬಂದಿದ್ದಾಳೆ” ಎಂದು ಸಂತಸ ಹಂಚಿಕೊಂಡಿದ್ದಾರೆ.