ಎಸ್. ಆರ್ ಹೀರೇಮಠ ಒಬ್ಬ ಅರೆ ಹುಚ್ಚ: ಸಿದ್ದರಾಮಯ್ಯ ಕಾಲಿನ ಧೂಳಿಗೂ ಸಮನಲ್ಲ -ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ.

ಮೈಸೂರು,ಆಗಸ್ಟ್,17,2022(www.justkannada.in): ನಿನ್ನೆ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಯಡಿಯೂರಪ್ಪ, ಎಚ್. ಡಿ.ಕುಮಾರಸ್ವಾಮಿ ಕುರಿತಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಎಸ್.ಆರ್ ಹೀರೇಮಠ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ಎಸ್ ಆರ್ ಹೀರೇಮಠ ಒಬ್ಬ ಅರೆ ಹುಚ್ಚ ಇವನೊಬ್ಬ ಸೆಮಿಕ್ರ್ಯಾಕ್ ನಾನು ಬೇಕಾದರೆ ಪ್ರೂ ಮಾಡುತ್ತೇನೆ. ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳದೆ,  ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್  ಅವರ ಮೇಲೆ ಏಕ ವಚನದಲ್ಲಿ ಮಾತಾಡುತ್ತಾನೆ. ಸಮಾಜಕ್ಕೆ ನಿನ್ನ ಕೊಡುಗೆ ಏನಪ್ಪ ಮಿಸ್ಟರ್ ಹೀರೇಮಠ್..? ಎಂದು ಗುಡುಗಿದರು.

ಡಿಕೆಶಿ ಅವರನ್ನ ಕಳ್ಳ ಅಂತಿಯಲ್ಲಪ್ಪಾ ನೀ ಏನ್ ಜಡ್ಜಾ..? ಅವರು ಕಳ್ಳರು ಅಂಥ ಪ್ರೂ ಮಾಡು ಏನ್ ದಾಖಲೆ ಇವೆ ತಗೋಂಡ ಬಾ. ಮೋದಿ, ಅಮಿತ್ ಶಾ ಅವರ ಬಗ್ಗೆನು ಮಾತಾಡು ಅವರ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ..? ಸಿದ್ದರಾಮಯ್ಯ ನವರ ಕಾಲಿನ ಧೂಳಿಗೆ ಸಮ ಇಲ್ಲ ನೀನು. ಥರ್ಡ್ ರೇಟ್ ಥರ್ಡ್ ಗ್ರೇಡ್ ವ್ಯಕ್ತಿ ನೀನು. ಇದು ನಿನಗೆ ಕೊನೆಯ ವಾರ್ನಿಂಗ್   ಹೀಗೆ ಮುಂದುವರೆ ನಮ್ಮ ಕಾರ್ಯಕರ್ತರು ಅಟ್ಟಾಡಿಸಿಕೊಂಡು ಒಡಿತಾರೆ ಅಷ್ಟೇ ಹುಷಾರ್ ಎಂದು ಎಂ.ಲಕ್ಷ್ಮಣ್ ಕೆಂಡಕಾರಿದರು.

ರಾಜ್ಯ ಸರ್ಕಾರ ಸಂಪೂರ್ಣ ಫೇಲ್ಯೂರ್: ಇದಕ್ಕೆ ಸಾಕ್ಷಿ ಮಾಧುಸ್ವಾಮಿ ಅವರ ಆಡೀಯೋನೇ ಸಾಕ್ಷಿ.

ಇದೇ ವೇಳೆ ರಾಜ್ಯ ಸರ್ಕಾರ ಕಾರ್ಯವೈಖರಿ ಟೀಕಿಸಿದ ಎಂ.ಲಕ್ಷ್ಮಣ್, ರಾಜ್ಯ ಸರ್ಕಾರ ಸಂಪೂರ್ಣ ಫೇಲ್ಯೂರ್ ಆಗಿದೆ. ಇದಕ್ಕೆ ಸಾಕ್ಷಿ ಮಾಧುಸ್ವಾಮಿ ಅವರ ಆಡೀಯೋನೇ ಸಾಕ್ಷಿ. ಸಿಎಂ ಬೊಮ್ಮಾಯಿ ಸುಮ್ಮನೇ ಮೇಯ್ಟೇನ್ ಮಾಡ್ತಾ ಇದ್ದಾರೆ ಅಷ್ಟೇ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ೧೭ ಜಿಲ್ಲೆಗಳಲ್ಲಿ  ಮಳೆ ಹಾನಿಯಾಗಿದೆ. ಎಷ್ಟು ಕಡೆ ಭೇಟಿ ನೀಡಿದ್ದೀರಿ…? ಜನರ ಕಷ್ಟ ಸುಖ ಕೇಳಿಲ್ಲ. ನಿಮ್ಮ ಅಧಿಕಾರ ಅವಧಿಯಲ್ಲಿ ನಿಮ್ಮ ಯೋಜನೆಗಳೇನು..? ನೀವು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಸಾಲ ಮಾಡಿದ್ದೀರಿ ಹೇಳಿ.? ಎಂದು ಸಿಎಂ ಬೊಮ್ಮಾಯಿಗೆ ಲಕ್ಷಣ್ ಕೆಲ ಪ್ರಶ್ನೆಗಳನ್ನ ಹಾಕಿದರು.

ಸರ್ಕಾರಕ್ಕೆ   ೫ ಲಕ್ಷದ ೭೭ ಸಾವಿರ ಕೋಟಿ ಸಾಲ ಇದೆ. ಬಿಜೆಪಿ ಬಂದ ಮೇಲೆ ೨.೫ ಲಕ್ಷ ಕೋಟಿ ಮಾಡಿದೆ. ಸರ್ಕಾರ ತೆವಳ್ತಾ ಇದೆ ಎನ್ನುವ ಮಾಧುಸ್ವಾಮಿ ಅವರ ಹೇಳಿಕೆ ನೂರಕ್ಕೆ ನೂರು ಸತ್ಯ. ಸದ್ಯಕ್ಕೆ ಕಾಂಗ್ರೆಸ್ ಗೆ ಬಿಜೆಪಿಯಿಂದ 9 ಜನ,  ಜೆಡಿಎಸ್ ನಿಂದ 11 ಜನ ಬರಲು ರೆಡಿಯಾಗಿದ್ದಾರೆ. ಅವರ ಹೆಸರುಗಳು ನನಗೆ ಗೊತ್ತು ಕಾಲ ಬಂದಾಗ ತಿಳಿಸುತ್ತೇನೆ  ಎಂದು ಕಾಂಗ್ರೆಸ್ ವಕ್ತಾರ ಲಕ್ಷಣ್ ಹೇಳಿಕೆದರು.

ಮುಡಾ ಅಧ್ಯಕ್ಷ ಸ್ಥಾನವನ್ನು ಹರಾಜಿಗೆ ಇಟ್ಟಿದ್ದಾರೆ‌.

ಮುಡಾ ಅಧ್ಯಕ್ಷ ಸ್ಥಾನವನ್ನು ಹರಾಜಿಗೆ ಇಟ್ಟಿದ್ದಾರೆ‌ ಎಂದು ಆರೋಪಿಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಎಲ್ಲ ನಿಗಮ ಮಂಡಳಿಗಳಿಗೂ ನೇಮಕ ಮಾಡಿದ್ದಾರೆ.  ಆದರೆ ಮುಡಾ ಅಧ್ಯಕ್ಷ ಸ್ಥಾನ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ.  ಯಾರೋ ಒಬ್ಬರು 10 ಕೋಟಿ ರೂ. ಕೊಡಲು ಒಪ್ಪಿದ್ದರು. ಅವರಿಗೂ ಕೊಡಲಿಲ್ಲ. ಹಿಂದಿನ ಅಧ್ಯಕ್ಷರಿಗೆ ಮತ್ತೆ 6 ತಿಂಗಳು ಮುಂದುವರಿಯಲು ಡಿಮಾಂಡ್ ಇಟ್ಟಿದ್ದಾರೆ.  ಒಬ್ಬನೇ ಒಬ್ಬ ವ್ಯಕ್ತಿಗೆ ಒಂದು ಸೈಟು ಅಥವಾ ಮನೆ ಕೊಟ್ಟಿಲ್ಲ.  ಅವರ ಸೈಟುಗಳನ್ನು ಭದ್ರಪಡಿಸಿಕೊಂಡಿದ್ದಾರೆ. ಯಾರಿಗಾದರೂ 3× 6 ಅಡಿ ಜಾಗ ಕೊಟ್ಟಿದ್ದರೆ ತೋರಿಸಿ.  ಜಿಲ್ಲಾ ಉಸ್ತುವಾರಿ ಸಚಿವ ಎಸ್‌‌.ಟಿ.ಸೋಮಶೇಖರ್ ರಿಯಲ್ ಎಸ್ಟೇಟ್ ಮ್ಯಾನ್. ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್‌.ಎ.ರಾಮದಾಸ್ ಇವರೆಲ್ಲ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ.  ಮೈಸೂರಿನ ರಸ್ತೆಗಳು ಗುಂಡಿ ಬಿದ್ದಿವೆ. ವಾಹನ ಸವಾರರು ಓಡಾಡುವುದೇ ಕಷ್ಟವಾಗಿದೆ.  ಸಚಿವರು ವಾರಕ್ಕೊಮ್ಮೆ ಬಂದು ಹೋಗುತ್ತಾರೆ ಎಂದು  ಎಂ.ಲಕ್ಷ್ಮಣ್ ಹರಿಹಾಯ್ದರು.

Key words: S. R Hiremath – half-mad- KPCC- spokesperson -M. Laxman