2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಬರುವುದು ಶತಸಿದ್ಧ- ಸಿಎಂ ಬೊಮ್ಮಾಯಿ ವಿಶ್ವಾಸ.

ಬೆಂಗಳೂರು,ಆಗಸ್ಟ್,17,2022(www.justkannada.in): 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಬರುವುದು ಶತಸಿದ್ಧ ಎಂದು ಸಿಎಂ  ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ  ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದ ಹಿನ್ನೆಲೆ ಕಾವೇರಿ ನಿವಾಸದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಬಿಎಸ್ ವೈಗೆ ಅತ್ಯಂತ ಉನ್ನತ ಸ್ಥಾನ ನೀಡಿದ್ದಕ್ಕೆ ನಮಗೆ ಸಂತೋಷವಾಗಿದೆ. ನಮ್ಮ ಉತ್ಸವ ಹೆಚ್ಚಾಗಿದೆ. ಬಿಎಸ್ ವೈಗೆ ಜವಾಬ್ದಾರಿ ನೀಡಿದ್ದಕ್ಕೆ ಹೈಕಮಾಂಡ್ ಗೆ ಧನ್ಯವಾದ. ಇದು ದೂರದೃಷ್ಠಿ ತೀರ್ಮಾನ ಎಂದರು.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸಹ ಬಿಎಸ್ ವೈ ಬಹಳ ಸಕ್ರಿಯರಾಗಿದ್ದರು.  ಬಿಎಸ್ ವೈ ಮಾರ್ಗದರ್ಶನದಲ್ಲೇ ನಾನು ನಡೆಯುತ್ತಿದ್ದೇನೆ . ರಾಜ್ಯ ಹಾಗೂ ದಕ್ಷಿಣ ಬಾರತದಲ್ಲಿ ಪಕ್ಷಕ್ಕೆ  ಮತ್ತಷ್ಟು ಬಲ  ಸಿಕ್ಕಿದೆ ಎಂದು ಸಿಎಂ ಬೊಮ್ಮಾಯಿ ನುಡಿದರು.

Key words:  certain – BJP- will –come-power -state -CM Bommai