ನಾಳೆ ಮೈಸೂರಿನಲ್ಲಿ ಅಂಚೆ ಇಲಾಖೆ ವತಿಯಿಂದ ಉದ್ಯೋಗ ಮೇಳ.

ಮೈಸೂರು,ಮೇ,15,2023(www.justkannada.in): ಭಾರತೀಯ ಅಂಚೆ ಇಲಾಖೆ, ಕೇಂದ್ರ ಗೃಹ ಇಲಾಖೆ, ರೈಲ್ವೆ ಇಲಾಖೆ, ಕಾರ್ಮಿಕ ಮತ್ತು  ಉದ್ಯೋಗ ಖಾತೆ ಇಲಾಖೆಗಳ ಸಹಯೋಗದೊಂದಿಗೆ ಭಾರತೀಯ ಅಂಚೆ ಇಲಾಖೆ ಆಶ್ರಯದಲ್ಲಿ ಮೈಸೂರಿನಲ್ಲಿ ಮಿಷನ್ ನೇಮಕಾತಿ-5ನೇ ರಾಷ್ಟ್ರೀಯ ಸಮಾರಂಭದ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ.

ಅಖಿಲಾ ಭಾರತ ವಾಕ್ ಶ್ರವಣ ಸಂಸ್ಥೆಯ ಆವರಣದಲ್ಲಿರುವ ನಾಲೆಡ್ಜ್ ಪಾರ್ಕ್ ನಲ್ಲಿ ನಾಳೆ(ಮೇ10)  ಬೆಳಗ್ಗೆ 10.00 ಗಂಟೆಗೆ ಉದ್ಯೋಗ ಮೇಳ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಕೃಷಿ ಮತ್ತು ರೈತೆ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

Key words: Job fair -tomorrow – Mysore – postal department