ಸಿದ್ಧರಾಮಯ್ಯ ಸಿಎಂ ಆಗಲಿ ಎಂದು ಅಭಿಮಾನಿಗಳಿಂದ ಪಟ್ಟು:  ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಕೆ.

ಬೆಂಗಳೂರು,ಮೇ,15,2023(www.justkannada.in):  ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ನಡುವೆ ಪೈಪೋಟಿ ಉಂಟಾಗಿದ್ದು ಈ ಸಂಬಂಧ ಹೈಕಮಾಂಡ್ ನೊಂದಿಗೆ ಚರ್ಚಿಸಲು ಸಿದ್ಧರಾಮಯ್ಯ ಈಗಾಗಲೇ ದೆಹಲಿಗೆ ತೆರಳಿದ್ದಾರೆ.

ಇತ್ತ ಸಿದ್ಧರಾಮಯ್ಯರಿಗೆ ಸಿಎಂ ಸ್ಥಾನ ನೀಡಲೇಬೇಕು ಎಂದು ಬೆಂಬಲಿಗರು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಸಿದ್ದರಾಮಯ್ಯಗೆ ಹೈಕಮಾಂಡ್ ಬೆಂಬಲ ಕೊಡಬೇಕು ಅಂತಾ ಬ್ಯಾನರ್ ಹಿಡಿದು ಸಿದ್ಧರಾಮಯ್ಯ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಸಿದ್ಧರಾಮಯ್ಯ ದೆಹಲಿಗೆ ತೆರಳುವ ಮುನ್ನ ಅವರ  ಸರ್ಕಾರಿ ನಿವಾಸದ ಮುಂದೆ ಅಭಿಮಾನಿಗಳು ಜಮಾಯಿಸಿ ಘೋಷಣೆ ಕೂಗಿದರು.

ಚಿತ್ರದುರ್ಗದಲ್ಲಿ ಅಹಿಂದ ಮುಖಂಡರು ಸಿದ್ಧರಾಮಯ್ಯ ಪರ ಬ್ಯಾಟಿಂಗ್ ಬೀಸಿದ್ದಾರೆ. ನೀಲಕಂಠೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿದ್ಧರಾಮಯ್ಯ ಅವರೇ ಸಿಎಂ ಆಗಲಿ ಎಂದು ಪ್ರಾರ್ಥಿಸಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಪರ ಘೋಷಣೆ ಕೂಗಿ ಸಿದ್ಧರಾಮಯ್ಯಗೆ ಸಿಎಂ ಸ್ಥಾನ ನೀಡಬೇಕೆಂದು ಅಹಿಂದ ಮುಖಂಡರು ಆಗ್ರಹಿಸಿದ್ದಾರೆ.sidd

ಇನ್ನೊಂದೆಡೆ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ನೆಲಮಂಗಲದ ವಾದಕುಂಟೆ ಗ್ರಾಮದ ಶ್ರೀರಾಮ ಮಂದಿರದಲ್ಲಿ ಡಿಕೆಶಿ ಅಭಿಮಾನಿಗಳು 1001 ತೆಂಗಿನಕಾಯಿ ಹೀಡುಗಾಯಿ ಹೊಡೆದು ಪೂಜೆ ಸಲ್ಲಿಸಿದ್ದಾರೆ. ಡಿಕೆ ಶಿವಕುಮಾರ್‌ಗೆ ಜೈಕಾರ ಹಾಕಿ ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿದ್ದಾರೆ.

ಒಟ್ಟಾರೆ ಕರ್ನಾಟಕದ ಸಿಎಂ ವಿಚಾರ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು ಸಿಎಂ ಯಾರಾಗಲಿದ್ದಾರೆ ಕಾದು ನೋಡಬೇಕಿದೆ.

Key words: Fans -plead  Siddaramaiah – become- CM-Special prayers