ಬಿಜೆಪಿ ನಾಯಕ ಸಿ.ಟಿ ರವಿ ಸೋಲಿನ ಬಗ್ಗೆ ವ್ಯಂಗ್ಯವಾಡಿದ ಎಂ.ಪಿ ಕುಮಾರಸ್ವಾಮಿ.  

ಚಿಕ್ಕಮಗಳೂರು,ಮೇ,,15,2023(www.justkannada.in): ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದಶಿ ಸಿ.ಟಿ. ರವಿ ಸೇರಿದಂತೆ ಹಾಲಿ ನಾಲ್ಕು ಶಾಸಕರನ್ನ ಕಾಂಗ್ರೆಸ್ ಸೋಲಿಸಿದೆ. ಈ ನಡುವೆ ಮತ್ತೊಂದೆಡೆ ಸಿ.ಟಿ.ರವಿ ಸೋಲಿನ ಬಗ್ಗೆ ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಎಂ.ಪಿ ಕುಮಾರಸ್ವಾಮಿ,  ಸಿ.ಟಿ.ರವಿ ನನ್ನನ್ನು ಬಿಜೆಪಿಯಿಂದ ಹೊರ ಕಳಿಸಿದರು. ಆದರೆ ಸಿ.ಟಿ.ರವಿಯನ್ನು ಕ್ಷೇತ್ರದಿಂದಲೇ ಜನ ಹೊರಕಳಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಜೀವ ತುಂಬಿದ್ದೇ ನಾನು. ಚಿಕ್ಕಮಗಳೂರಿನಲ್ಲಿ ವೀರಶೈವ-ಲಿಂಗಾಯತರ ಕ್ಷೇತ್ರ. ಸಿ.ಟಿ.ರವಿ ದತ್ತಮಾಲೆ, ಅಹಿತಕರ ಘಟನೆ ಮುಂದಿಟ್ಟು ಪ್ರಚಾರ ನಡೆಸಿದರು. ಇನ್ಮುಂದೆ ಸಿ.ಟಿ.ರವಿಯ ಈ ವಿಚಾರಗಳು ಕೆಲಸ ಮಾಡುವುದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಮೊಬೈಲ್ ಸ್ವಿಚ್​​​ ಆಫ್ ಮಾಡಲಿಲ್ಲ. ಫೋನ್ ಸ್ವಿಚ್​​​ ಆಫ್ ಮಾಡಿದ್ದರೇ ಬಿಜೆಪಿಗೆ 50 ಸೀಟ್ ಅಷ್ಟೇ ಬರುತ್ತಿತ್ತು ಎಂದು ಕಿಡಿಕಾರಿದರು.

Key words: MP Kumaraswamy – BJP leade-r CT Ravi- defeat.