ಮೈಸೂರು,ಆಗಸ್ಟ್,8,2026 (www.justkannada.in): JSS ಕಾನೂನು ಕಾಲೇಜು (ಸ್ವಾಯತ್ತ), ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು, ಕಾನೂನು ಇಲಾಖೆ, ಮೈಸೂರು ವಕೀಲರ ಸಂಘ ಹಾಗೂ ಹಾರ್ಟ್ ಫುಲ್ ನೆಸ್ ಇನ್ಸ್ ಟಿಟ್ಯೂಟ್ (Heartfulness Institute) ಸಹಯೋಗದಲ್ಲಿ ಪೋಕ್ಸೋ ಕಾಯ್ದೆ, ಮಾದಕವಸ್ತುಗಳ ದುರ್ಬಳಕೆ ತಡೆ ಮತ್ತು ರ‍್ಯಾಗಿಂಗ್ ವಿರೋಧಿ ಕಾನೂನು ಕುರಿತು ಕಾನೂನು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೈಸೂರಿನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ-1ರ ಜಿಲ್ಲಾ ನ್ಯಾಯಾಧೀಶ ಆನಂದ್ ಪಿ. ಹೊಗಡೆ, ಡಿಎಲ್ ಎಸ್ ಎ DLSA ಮೈಸೂರಿನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಕರ್ನಾಟಕ ಹೈಕೋರ್ಟ್ ನ ಹಿರಿಯ ವಕೀಲ ಹಾಗೂ ರಾಜ್ಯಪಾಲರ ಕಾನೂನು ಸಲಹೆಗಾರ ಸಂತೋಷ್ ಎಸ್. ನಾಗರಾಳೆ, ಕರ್ನಾಟಕ ಹೈಕೋರ್ಟ್ ನ ಹಿರಿಯ ವಕೀಲ ಮಧುಕರ್ ದೇಶಪಾಂಡೆ ಹಾಗೂ ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್ ಅವರು ಪಾಲ್ಗೊಂಡು ಕಾನೂನು ಅರಿವು ಮೂಡಿಸಿದರು.
ಜೆಎಸ್ ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಕೆ.ಎಸ್. ಸುರೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ವಾಣಿಶ್ರೀ ಅಧ್ಯಕ್ಷತೆ ವಹಿಸಿದ್ದರು.
ಹಾರ್ಟ್ ಫುಲ್ ನೆಸ್ ಇನ್ಸ್ ಟಿಟ್ಯೂಟ್ (Heartfulness Institute) ನ ಪ್ರಾದೇಶಿಕ ಸಂಯೋಜಕ ಕೆ. ಮಧುಸೂದನ್ ಹಾಗೂ ಜೆಎಸ್ ಎಸ್ ಕಾನೂನು ಕಾಲೇಜಿನ IQAC ಸಂಯೋಜಕ ಡಾ. ಜಗದೀಶ್ ಎ.ಟಿ. ಉಪಸ್ಥಿತರಿದ್ದರು.
ENGLISH SUMMARY…
JSS Law College (Autonomous), Mysore, in collaboration with the Karnataka State Legal Services Authority, District Legal Services Authority, Mysore, Department of Law, Mysore Bar Association and Heartfulness Institute, organised a Legal Awareness Programme on POCSO, Prevention of Drug Abuse and Anti-Ragging.
The programme featured Shri Anand P. Hogade, District Judge, Fast Track Special Court-I, Mysore; Shri Nagaraja Siddappa Ankasadoddi, Senior Civil Judge & Member Secretary, DLSA, Mysore; Shri Santosh S. Nagarale, Senior Advocate, Hon’ble Karnataka High Court and Legal Adviser to the Hon’ble Governor; Shri Madhukar Deshpande, Senior Advocate, Hon’ble Karnataka High Court; & Shri S. Lokesh, President, Bar Association, Mysore.
The programme was inaugurated by Prof. K. S. Suresh, Chief Executive, JSS Law College & chaired by Dr. N. Vanishree, Principal, JSS Law College, in the presence of Mr. K. Madhusudhan, Regional Facilitator, Heartfulness Institute and Dr. Jagadish A.T., IQAC Coordinator, JSS Law College
Key words: Mysore, Awareness, POCSO, drug abuse, anti-ragging laws







