ಮೈಸೂರು: ನಗರಸಭೆಯ ನಾಲ್ಕು ಜನ ಸದಸ್ಯರು ಅನರ್ಹ

ಮೈಸೂರು,ಜುಲೈ,30,2025 (www.justkannada.in): ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ್ದ ನಂಜನಗೂಡು ನಗರಸಭೆಯ ನಾಲ್ಕು ಜನ ಸದಸ್ಯರನ್ನು ಅನರ್ಹಗೊಳಿಸಿ ಮೈಸೂರಿನ ಜಿಲ್ಲಾಧಿಕಾರಿಗಳ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.

ಗಿರೀಶ್ ಕುಮಾರ್ ಟಿಎಂ, ಗಾಯತ್ರಿ, ಮೀನಾಕ್ಷಿ ನಾಗರಾಜು, ವಿಜಯಲಕ್ಷ್ಮೀ ಅನರ್ಹಗೊಂಡ ಸದಸ್ಯರು. ನಾಲ್ವರು ಸಹ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಚಿಹ್ನೆಯಿಂದ ಗೆಲುವು ಸಾಧಿಸಿದ್ದರು ಬಿಜೆಪಿ ಚಿಹ್ನೆಯಿಂದ ಗೆದ್ದು ಅಧಿಕಾರದ ಗದ್ದುಗೆ ಹಿಡಿದಿದ್ದರು.

ನಂಜನಗೂಡು ನಗರದ ವಾರ್ಡ್ ನಂಬರ್ 1 ನೇ ಸದಸ್ಯ ಗಿರೀಶ್ ಕುಮಾರ್ ಟಿಎಂ, ವಾರ್ಡ್ ಸಂಖ್ಯೆ 12 ಸದಸ್ಯೆ ಗಾಯತ್ರಿ, ವಾರ್ಡ್ ನಂಬರ್ 22 ಸದಸ್ಯೆ ಮೀನಾಕ್ಷಿ ನಾಗರಾಜು,  ವಾರ್ಡ್ ಸಂಖ್ಯೆ 27 ರ ಸದಸ್ಯೆ ವಿಜಯಲಕ್ಷ್ಮೀ ಎಂಬುವವರನ್ನು ಸಚೇತನ (ವಿಪ್) ಅನ್ನು ಉಲ್ಲಂಘನೆ ಮಾಡಿರುವುದರಿಂದ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಅದಿನಿಯಮ 1987 ಸೆಕ್ಷನ್ 3(1)(b) ಉಲ್ಲಂಘನೆಯ ಆಧಾರದ ಮೇಲೆ ನಾಲ್ವರು ನಗರಸಭಾ ಸದಸ್ಯರನ್ನು ಸದಸ್ಯತ್ವದಿಂದ ಅನರ್ಹ ಗೊಳಿಸಿ‌ ಮೈಸೂರಿನ ಜಿಲ್ಲಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.vtu

Key words: Mysore,  Municipal Council , Four, Membership, Cancellation