Friday, September 18, 2026

BDA Apartments

ಬೆಂಗಳೂರಿನಲ್ಲಿ ‘ಅಲ್ ಖೈದಾ’ ನಾಯಕಿ ಬಂಧನ BDA JK_Adv BDA Adv
Home Crime ಬೆಂಗಳೂರಿನಲ್ಲಿ ‘ಅಲ್ ಖೈದಾ’ ನಾಯಕಿ ಬಂಧನ

ಬೆಂಗಳೂರಿನಲ್ಲಿ ‘ಅಲ್ ಖೈದಾ’ ನಾಯಕಿ ಬಂಧನ

ಬೆಂಗಳೂರು,ಜುಲೈ, 30,2025 (www.justkannada.in): ಉಗ್ರ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನಲ್ಲಿ ಅಲ್ ಖೈದಾ ಸಂಘಟನೆಯ ನಾಯಕಿಯನ್ನ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

30 ವರ್ಷದ ಶಮಾ ಪರ್ವೀನ್ ಬಂಧಿತಳಾಗಿದ್ದು ಈಕೆ ಬೆಂಗಳೂರಿನಿಂದಲೇ ಉಗ್ರಗ್ರಾಮಿಗಳ ನೇಮಕ ಮಾಡುವುದು ಸೇರಿದಂತೆ ವಿವಿಧ ಉಗ್ರ ಚಟುವಟಿಕೆ ನಡೆಸುತ್ತಿದ್ದಳು. ಖಚಿತ ಮಾಹಿತಿ ಮೇರೆಗೆ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶರ್ಮಾ ಪರ್ವಿನ್ ಜಾರ್ಖಂಡ್ ಮೂಲದವಳಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಳು. ಉಗ್ರ ಸಂಘಟನೆ ಬಲಗೊಳಿಸಲು ಈಕೆ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಈಕೆಯನ್ನು ಬಂಧಿಸಲಾಗಿದೆ. ಹಾಗೂ ಆಕೆ ಮನೆಯಲ್ಲಿದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಕೂಡ ಜಪ್ತಿ ಮಾಡಲಾಗಿದೆ.vtu

Key words: Al Qaeda, leader, arrested, Bengaluru