Sunday, September 20, 2026

BDA Apartments

ರಂಜಾನ್ ತಿಂಗಳಲ್ಲಿ ಉರ್ದು ಶಾಲೆಗಳ ಸಮಯ ಬದಲಾವಣೆ: ಸರ್ಕಾರದ ವಿರುದ್ದ ಯತ್ನಾಳ...
Home Front Page ರಂಜಾನ್ ತಿಂಗಳಲ್ಲಿ ಉರ್ದು ಶಾಲೆಗಳ ಸಮಯ ಬದಲಾವಣೆ: ಸರ್ಕಾರದ ವಿರುದ್ದ ಯತ್ನಾಳ್ ವಾಗ್ದಾಳಿ

ರಂಜಾನ್ ತಿಂಗಳಲ್ಲಿ ಉರ್ದು ಶಾಲೆಗಳ ಸಮಯ ಬದಲಾವಣೆ: ಸರ್ಕಾರದ ವಿರುದ್ದ ಯತ್ನಾಳ್ ವಾಗ್ದಾಳಿ

ಬೆಂಗಳೂರು,ಫೆಬ್ರವರಿ,3,2026 (www.justkannada.in):  ರಂಜಾನ್ ತಿಂಗಳಲ್ಲಿ ಉರ್ದು ಶಾಲೆಗಳ ಸಮಯ ಬದಲಾವಣೆ ನಿರ್ಧಾರ ಮಾಡಿರುವ ರಾಜ್ಯ ಸರ್ಕಾರದ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರಿಗೆ ಸುಮ್ಮನೆ ಒಂದು ತಿಂಗಳು ರಜೆ ಕೊಟ್ಟುಬಿಟ್ಟರೆ ಒಳ್ಳೆಯದು. ಅವರು ಏನು ಶಾಲೆಯಲ್ಲಿ ಕಲಿಯುವುದು ಬೇಡ. ಭಯೋತ್ಪಾದಕರು ದೇಶ ವಿರೋಧಿ ಚಟುವಟಿಕೆಗೆ ಬಳಸಿದ್ರೆ ಒಳ್ಳೆಯದು.  ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ಮುಸ್ಲೀಮರ ತುಷ್ಟೀಕರಣ ಮಾಡುತ್ತಿದ್ದಾರೆ.  ಸಮಾನತೆ ಶಬ್ದಕ್ಕೆ ಅರ್ಥವಿಲ್ಲದ ರೀತಿಯಲ್ಲಿ ಸುತ್ತೋಲೆ ಹೊರಡಿಸುತ್ತಿದ್ದಾರೆ.  ಇದು ಅತ್ಯಂತ ಹೇಯವಾದ ಕೆಲಸ. ಹಿಂದೂ ಹಬ್ಬಗಳಳ್ಲೂ ಮಕ್ಕಳಿಗೆ ರಜೆ ಕೊಡಬೇಕೆಂದು ಆಗ್ರಹಿಸುತ್ತೇವೆ ಎಂದರು.

ದ್ವೇಷ ಭಾಷಣ ತಡೆ ಮಸೂದೆಯನ್ನು ರಾಷ್ಟ್ರಪತಿಗೆ ಕಳುಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್,  ಕಾಂಗ್ರೆಸ್ ದ್ವೇಷ ಭಾಷಣ ಬಿಲ್  ತರುವುದು ಸಂವಿಧಾನ ವಿರೋಧಿ ಎಂದು ಟೀಕಿಸಿದರು.

Key words: Urdu schools, timings change, Ramazan, MLA Yatnal