Sunday, August 23, 2026

BDA Apartments

Home Cinema ಲಾಕ್ ಡೌನ್ ಉಲ್ಲಂಘಿಸಿದ ಪೂನಂ ಪಾಂಡೆ ಬಂಧಿಸಿದ ಮುಂಬೈ ಪೊಲೀಸರು

ಲಾಕ್ ಡೌನ್ ಉಲ್ಲಂಘಿಸಿದ ಪೂನಂ ಪಾಂಡೆ ಬಂಧಿಸಿದ ಮುಂಬೈ ಪೊಲೀಸರು

ಮುಂಬೈ, ಮೇ 11, 2020 (www.justkannada.in):ಲಾಕ್ ಡೌನ್ ಉಲ್ಲಂಘನೆ ಮಾಡಿದ ಆರೋಪದಲ್ಲಿ ನಟಿ ಪೂನಮ್ ಪಾಂಡೆ ಹಾಗೂ ಆಕೆಯ ಗೆಳೆಯನನ್ನು ಮುಂಬೈನ ಮರೀನ್ ಡ್ರೈವ್ ಪೊಲೀಸರು ಬಂಧಿಸಿದ್ದಾರೆ.

ಪೂನಂ ಪಾಂಡೆ ಹಾಗೂ ಆಕೆಯ ಬಾಯ್ ಫ್ರೆಂಡ್ ಸ್ಯಾಮ್ ಅಹ್ಮದ್ ಲಾಕ್ ಡೌನ್ ನಡುವೆಯೂ ಮರೀನ್ ಡ್ರೈವ್ ನಲ್ಲಿ ಬಿಎಂಡಬ್ಲೂ ಕಾರಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಪೊಲೀಸರು ಇಬ್ಬರನ್ನು ಬಂಧಿಸಿ ಕಾರು ಜಪ್ತಿ ಮಾಡಲಾಗಿದೆ.

ಪೂನಂ ಪಾಂಡೆ ಹಾಗೂ ಆಕೆಯ ಗೆಳೆಯನ ವಿರುದ್ಧ ಐಪಿಸಿ ಸೆಕ್ಷನ್ 269 ಮತ್ತು 188 ಅಡಿಯಲ್ಲಿ ಹಾಗೂ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.