Sunday, August 23, 2026

BDA Apartments

Home Cinema ಲಂಡನ್ ನಿಂದ ಮರಳಿ ಮನೆಗೆ ಬಂದ ನಟಿ ಜಯಮಾಲ ಪುತ್ರಿ ಸೌಂದರ್ಯ

ಲಂಡನ್ ನಿಂದ ಮರಳಿ ಮನೆಗೆ ಬಂದ ನಟಿ ಜಯಮಾಲ ಪುತ್ರಿ ಸೌಂದರ್ಯ

ಬೆಂಗಳೂರು,ಮೇ 11, 2020 (www.justkannada.in): ನಟಿ ಹಾಗೂ ವಿಧಾನ ಪರಿಷತ್‌ ಸದಸ್ಯೆ ಜಯಮಾಲ ಪುತ್ರಿ ಸೌಂದರ್ಯ ಭಾರತಕ್ಕೆ ಮರಳಿದ್ದಾರೆ.

ಇಂದು ಲಂಡನ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕನ್ನಡಿಗರನ್ನು ಬೆಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಕರೆ ತಂದಿದ್ದು, ಇದರಲ್ಲಿ ಸೌಂದರ್ಯ ಕೂಡ ಇದ್ದಾರೆ.

ವಿದೇಶದಲ್ಲಿ ಸಿಕ್ಕಿ ಹಾಕಿಕೊಂಡಿರುವ ಕನ್ನಡಿಗರನ್ನು ಸರ್ಕಾರ ವಾಪಸ್ ಕರೆತರುತ್ತಿದೆ. ಈ ವಿಮಾನದಲ್ಲಿ ನಟಿ ಸೌಂದರ್ಯ ಜಯಮಾಲ ಸಹ ಇದ್ದು, ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಲಾಕ್‌ಡೌನ್ ಘೋಷಣೆಯಾದಾಗ ಲಂಡನ್‌ನಿಂದ ಭಾರತಕ್ಕೆ ಬರಲು ಪ್ರಯತ್ನಪಟ್ಟರು. ಆದರೆ, ವಿಮಾನಗಳನ್ನು ಬಂದ್ ಮಾಡಿದ್ದ ಕಾರಣ ಅವರಿಗೆ ಭಾರತಕ್ಕೆ ಬರಲು ಸಾಧ್ಯ ಆಗಿರಲಿಲ್ಲ.