ತಿಂಗಳ ಅಂತ್ಯದಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶ

ನವದೆಹಲಿ, ಮೇ 11, 2020 (www.justkannada.in): ಒಲಿಂಪಿಕ್ಸ್‌’ಗೆ ತಯಾರಿ ನಡೆಸುತ್ತಿರುವ ದೇಶದ ಅಗ್ರ ಕ್ರೀಡಾಪಟುಗಳಿಗೆ ಈ ತಿಂಗಳಾಂತ್ಯದಲ್ಲಿ ಹೊರಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಅನುವು ಮಾಡಿ ಕೊಡಲಾಗುತ್ತದೆ.

ಈ ವಿಷಯವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಸ್ಪಷ್ಟಪಡಿಸಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ದಿಗ್ಬಂಧನವಿದ್ದು ಅಥ್ಲೀಟ್‌ಗಳ ಹೊರಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅನುಮತಿ ಇರಲಿಲ್ಲ.

ಇದೀಗ ಲಾಕ್‌ಡೌನ್‌ ಮೇ 17ರ ಬಳಿಕ ಅಂತ್ಯವಾಗಲಿದೆ , ಆನಂತರ ಕ್ರೀಡಾಪಟುಗಳಿಗೆ ಹೊರಗೆ ಅಭ್ಯಾಸ ನಡೆಸಲು ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.