Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Crime ಜೆಡಿಎಸ್ ಶಾಸಕ ಮತ್ತು ಪುತ್ರನ ವಿರುದ್ದ ಸ್ನೇಹಮಯಿ ಕೃಷ್ಣ ” ಭೂಚಕ್ರ”…!

ಜೆಡಿಎಸ್ ಶಾಸಕ ಮತ್ತು ಪುತ್ರನ ವಿರುದ್ದ ಸ್ನೇಹಮಯಿ ಕೃಷ್ಣ ” ಭೂಚಕ್ರ”…!

ಮೈಸೂರು,ಜನವರಿ,28,2025 (www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ನಡೆಸಿದ್ದು,  ಹೈಕೋರ್ಟ್ ಗೆ ವರದಿ ಸಲ್ಲಿಕೆಯಾಗಿದೆ. ಈ ಮಧ್ಯೆ ಇದೀಗ ಜೆಡಿಎಸ್​​ ಶಾಸಕ ಜಿಟಿ ದೇವೇಗೌಡ ವಿರುದ್ಧವೂ ಸಹ ಅಕ್ರಮವಾಗಿ 50:50 ಅನುಪಾತದಲ್ಲಿ ಸುಮಾರು 19 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸ್ನೇಹಮಯಿ‌ಕೃಷ್ಣ ದೂರು ನೀಡಿದ್ದಾರೆ.ಜೆಡಿಎಸ್ ಶಾಸಕ ಮತ್ತು ಪುತ್ರನ ವಿರುದ್ದ ಸ್ನೇಹಮಯಿ ಕೃಷ್ಣ ” ಭೂಚಕ್ರ”…! nypunya1

ಈ ಸಂಬಂಧ ಆರ್ ಟಿ ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮೈಸೂರಿನ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಶಾಸಕ ಜಿಟಿ ದೇವೇಗೌಡ ಹಾಗೂ ಪುತ್ರ ಹರೀಶ್ ಗೌಡ ವಿರುದ್ಧ ದೂರು ಸಲ್ಲಿಸಿದ್ದಾರೆ.

ಶಾಸಕ ಜಿ.ಟಿ ದೇವೇಗೌಡರ ಕುಟುಂಬ ಸರ್ವೇ ನಂ 81/2 ರಲ್ಲಿ 2.22 ಎಕರೆ ಜಮೀನಿಗೆ ಪರಿಹಾರ ನೀಡಿಲ್ಲ ಎಂದು 19 ನಿವೇಶನ ಪಡೆದಿದ್ದು, ಈ ಮೂಲಕ ಶಾಸಕ ಜಿಟಿ ದೇವೇಗೌಡರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಾಗೆಯೇ ಮಾಲೀಕನ ಮನೆಗೆ ತೆರಳಿ ಮಾತುಕತೆ ನಡೆಸಿರುವ ಫೋಟೋವನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದಾರೆ.ಜೆಡಿಎಸ್ ಶಾಸಕ ಮತ್ತು ಪುತ್ರನ ವಿರುದ್ದ ಸ್ನೇಹಮಯಿ ಕೃಷ್ಣ " ಭೂಚಕ್ರ"...! gtd

ದೂರು ಸಲ್ಲಿಕೆ ಬಳಿಕ ಮಾತನಾಡಿರುವ ಸ್ನೇಹಮಯಿ ಕೃಷ್ಣ, ಬೇನಾಮಿ ಹೆಸರಿನಲ್ಲಿ ಕೆಲವು ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು ಸೈಟ್ ಗಳನ್ನ ಪಡೆದಿದ್ದಾರೆ. ಈ ಸಂಬಂಧ ಕೆಲವು ದಾಖಲೆಗಳನ್ನು  ಲೊಕಾಯುಕ್ತ ಕಚೇರಿಗೆ ನೀಡಿದ್ದೇನೆ. ಶಾಸಕ ಜಿಟಿ ದೇವೇಗೌಡರಿಂದ ಅಧಿಕಾರ ದುರ್ಬಳಕೆಯಾಗಿದೆ. ಜಿಟಿ ದೇವೇಗೌಡ ಹಾಗೂ ಪುತ್ರ ಹರೀಶ್ ಗೌಡ  ಅವರು  ದೇವನೂರು ಸರ್ವೆ ನಂಬರ್ ನಲ್ಲಿ 81/02 ರಲ್ಲಿ 2.22 ಎಕರೆ ಜಮೀನನ್ನು ಖರೀದಿಸಿದ್ದರು. ಸದರಿ ಜಮೀನಿಗೆ ಪರಿಹಾರ ನೀಡಿಲ್ಲ ಎಂದು  50:50  ಅನುಪಾತದಲ್ಲಿ ಅಕ್ರಮವಾಗಿ ಸುಮಾರು 19 ನಿವೇಶನಗಳನ್ನು ಪಡೆಯಲು  ಮಾಲೀಕರ ಮನೆಗೆ ಭೇಟಿ ನೀಡಿದ್ದಾರೆ. ಮನೆಗೆ  ಭೇಟಿ ನೀಡಿರುವ ಫೋಟೋಗಳನ್ನು ನೀಡಿದ್ದೇನೆ. ಜಿಟಿ ದೇವೇಗೌಡರ ಸಹೋದರಿ ಮಗ ಮಹೇಂದ್ರ ರವರ ಹೆಸರಲ್ಲಿ 50:50 ಸೈಟ್ ಪಡೆದಿದ್ದಾರೆ. ಅಕ್ರಮವಾಗಿ ನಿವೇಶನ ಪಡೆದಿರುವ ಬಗ್ಗೆ ದಾಖಲೆಗಳನ್ನು ಒದಗಿಸಿದ್ದೇನೆ ಎಂದು ತಿಳಿಸಿದ್ದಾರೆ.

Key words: Muda scam, Snehamayi Krishna, Lokayukta,  JDS MLA, son