Tuesday, September 22, 2026

BDA Apartments

Home Front Page ಮುಡಾ ಹಗರಣ: ಸಿದ್ದರಾಮಯ್ಯ ಕ್ಲೀನ್ ಇಮೇಜ್ ಗೆ ಧಕ್ಕೆ ತರುವ ಯೋಜಿತ ಕೆಲಸ- ಸಚಿವ ಕೆ.ಎನ್...

ಮುಡಾ ಹಗರಣ: ಸಿದ್ದರಾಮಯ್ಯ ಕ್ಲೀನ್ ಇಮೇಜ್ ಗೆ ಧಕ್ಕೆ ತರುವ ಯೋಜಿತ ಕೆಲಸ- ಸಚಿವ ಕೆ.ಎನ್ ರಾಜಣ್ಣ

ತುಮಕೂರು,ಜುಲೈ, 27,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಹಕಾರ ಸಚಿವ ಕೆ.ಎನ್ ರಾಜಣ್ಣ, ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್ ಗೆ ಧಕ್ಕೆ ತರುವ ಯೋಜಿತ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಸೈಟು ಪಡೆದವರೇ ಇಂದು ಆರೋಪ ಮಾಡುತ್ತಿರುವುದು.  ಸಿಎಂ ಸಿದ್ದರಾಮಯ್ಯ ವಿರುದ್ದ ಆರೋಪ ಮಾಡುವವರೇ ಮುಡಾದ ಫಲಾನುಭವಿಗಳು ಸುಳ್ಳು ದಾಖಲಾತಿ ನೀಡಿ ಸೈಟು ಪಡೆದವರೆ ಇಂದು ಪ್ರಶ್ನೆ ಮಾಡುವುದು ಸರಿಯಲ್ಲ ಎಂದರು.ಮುಡಾ ಹಗರಣ kn rajanna

ಸಿದ್ದರಾಮಯ್ಯನವರ ಕ್ಲೀನ್‌ ಇಮೇಜ್‌ಗೆ ಧಕ್ಕೆ ತರುವ ಯೋಜಿತ ವಾದ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯುವ ಕೆಲಸ ಬಿಜೆಪಿ ಮಾಡುತ್ತಿದೆ. ಮುಡಾ ಪ್ರಕರಣ ಸಂಬಂಧ ಬಿಜೆಪಿಯವರು ಪಾದಯಾತ್ರೆ ಮಾಡುವುದಾಗಿ ತಿಳಿಸಿದ್ದಾರೆ. ಅವರು ಪ್ರತಿಭಟನಾ ರ್ಯಾಲಿ ಮಾಡಿದರೆ ನಾವೂ ಸಹ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅಹಿಂದದವರು ಪ್ರತಿಭಟನೆ ಮಾಡುತ್ತೇವೆ. ಎಂದು ಎಚ್ಚರಿಕೆ ನೀಡಿದರು.

Key words: Muda Scam, Siddaramaiah, clean image, Minister, KN Rajanna