Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Crime ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ : ಕಾರಾಗೃಹದಲ್ಲೇ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು.

ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ : ಕಾರಾಗೃಹದಲ್ಲೇ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು.

Former MUDA Commissioner Dinesh Kumar was reportedly questioned by the Mysuru Lokayukta Police at the Bangalore Jail on Friday. Just two days ago, the Lokayukta Police had approached the court seeking Dinesh Kumar's custody for further questioning. In this regard, the Mysuru Lokayukta Police had filed a petition in the Special People's Representatives Court in Bengaluru. The former commissioner had filed a writ petition seeking custody of Dinesh Kumar, who is currently serving a prison sentence, for further questioning in the MUDA scam.

 

ಬೆಂಗಳೂರು, ಡಿ.೦೯,೨೦೨೫:   ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ರನ್ನು ಮೈಸೂರು ಲೋಕಾಯುಕ್ತ ಪೊಲೀಸರು ಶುಕ್ರವಾರ  ಬೆಂಗಳೂರು ಕಾರಾಗೃಹದಲ್ಲೇ ವಿಚಾರಣೆ ನಡೆಸಿದ ವರದಿಯಾಗಿದೆ.

ಎರಡು ದಿನಗಳ ಹಿಂದಷ್ಟೆ, ಹೆಚ್ಚಿನ ವಿಚಾರಣೆಗೆ ದಿನೇಶ್‌ ಕುಮಾರ್‌ ಅವರನ್ನು ಕಸ್ಟಡಿಗೆ ನೀಡುವಂತೆ  ಲೋಕಾಯುಕ್ತ ಪೊಲೀಸರು ನ್ಯಾಯಾಲದ ಮೊರೆ ಹೊಕ್ಕಿದ್ದರು.

ಈ ಸಂಬಂಧ ಮೈಸೂರು ಲೋಕಾಯುಕ್ತ ಪೊಲೀಸರು, ಬೆಂಗಳೂರಿನಲ್ಲಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮುಡಾ ಹಗರಣದ ಹೆಚ್ಚಿನ ವಿಚಾರಣೆಗೆ ಮಾಜಿ ಆಯುಕ್ತ, ಹಾಲಿ ಜೈಲು ಶಿಕ್ಷೆಗೆ ಒಳಪಟ್ಟಿರುವ ದಿನೇಶ್‌ ಕುಮಾರ್‌ ಅವರನ್ನು ಕಸ್ಟಡಿಗೆ ನೀಡುವಂತೆ ರಿಟ್‌ ಅರ್ಜಿ ಸಲ್ಲಿಸಿ ಕೋರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಮೈಸೂರು ಲೋಕಾಯುಕ್ತ ಪೊಲೀಸರ ಅರ್ಜಿ ಪುರಸ್ಕರಿಸಿ ಡಿ. ೧೨ ರಂದು ಕಸ್ಟಡಿಗೆ ನೀಡುವಂತೆ ಆದೇಶಿಸಿತ್ತು.

ಆದರೆ, ಇಂದು ಕಸ್ಟಡಿಗೆ ಪಡೆಯುವುದು ವಿಳಂಬವಾದ ಕಾರಣ, ಮೈಸೂರು ಲೋಕಾಯುಕ್ತರು ಕಾರಾಗೃಹದಲ್ಲೇ ದಿನೇಶ್‌ ಕುಮಾರ್‌ ಅವರ ವಿಚಾರಣೆ ನಡೆಸಿದರು ಎಂದು ಉನ್ನತ ಮೂಲಗಳು “ ಜಸ್ಟ್‌ ಕನ್ನಡ” ಗೆ ಮಾಹಿತಿ ನೀಡಿವೆ.

2025 ಸೆಪ್ಟೆಂಬರ್ 16 ರಂದು ದಿನೇಶ್‌ ಕುಮಾರ್‌  ರನ್ನು ಅಕ್ರಮ ಹಣ ವರ್ಗಾವಣೆ (money-laundering) ಪ್ರಕರಣದಲ್ಲಿ ಹಾಗೂ  ನಿವೇಶನಗಳ  ಅಕ್ರಮ ಹಂಚಿಕೆ ಆರೋಪದ ಅಡಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಂಧಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

key words: Former MUDA Commissioner, Dinesh Kumar, Lokayukta police, interrogated, Bangalore jail.

ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ jk02_new jk02 new

SUMMARY:

Former MUDA Commissioner Dinesh Kumar: Lokayukta police interrogated him in Bangalore jail.

Former MUDA Commissioner Dinesh Kumar was reportedly questioned by the Mysuru Lokayukta Police at the Bangalore Jail on Friday. Just two days ago, the Lokayukta Police had approached the court seeking Dinesh Kumar’s custody for further questioning.

ಕಾರಾಗೃಹದಲ್ಲೇ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು lokapolice

In this regard, the Mysuru Lokayukta Police had filed a petition in the Special People’s Representatives Court in Bengaluru. The former commissioner had filed a writ petition seeking custody of Dinesh Kumar, who is currently serving a prison sentence, for further questioning in the MUDA scam.