ಮೈಸೂರು,ನವೆಂಬರ್,14,2026 (www.justkannada.in): ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರು ಕಾಂಗ್ರೆಸ್ ತೊರೆಯುತ್ತಾರೆಯೇ ಎಂಬ ವಿಚಾರ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಸಂಸದ ಸುನೀಲ್ ಬೋಸ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಸುನೀಲ್ ಬೋಸ್, ಕಾಂಗ್ರೆಸ್ ಪಕ್ಷ ನಮ್ಮ ಕುಟುಂಬಕ್ಕೆ ಮೋಸ ಅನ್ಯಾಯ ಮಾಡಿಲ್ಲ. ನಮ್ಮ ತಂದೆ ಅವರನ್ನ ಮಂತ್ರಿ ಮಾಡಿದೆ. ಗೌರವದಿಂದ ನೋಡಿಕೊಂಡಿದೆ ನಾವು ಕಾಂಗ್ರೆಸ್ ನಲ್ಲೇ ಇರುತ್ತೇವೆ. ಮುಂದೆಯೂ ಕಾಂಗ್ರೆಸ್ಸಿನಿಂದಲೇ ಸ್ಪರ್ಧೆ ಮಾಡುತ್ತೇವೆ. ಈಗಾಗಲೇ ಈ ವಿಚಾರವಾಗಿ ನಾನು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದರು.
ಪಕ್ಷಾಂತರ ಮಾಡುವವರು 2027ಕ್ಕೆ ಮಾಡ್ತಾರೆ ಅಂತಾನೂ ಹೇಳಿದ್ದೇನೆ. ನಾವು ಪಕ್ಷ ಬಿಡುತ್ತೇವೆ ಎಂದು ಹೇಳಿಲ್ಲ ಸಂಸದ ಸುನೀಲ್ ಬೋಸ್ ತಿಳಿಸಿದರು. 






