ತಾಂತ್ರಿಕ ದೋಷದಿಂದ ಲಲಿತಾ ಮಹಲ್ ಹೆಲಿಪ್ಯಾಡ್‌ನಲ್ಲೇ ಉಳಿದ ಸೇನಾ ಹೆಲಿಕಾಪ್ಟರ್ — ಇಂದು ಬೆಳಗ್ಗೆ ಹಾರಾಟ ನಡೆಸಿ ಬೆಂಗಳೂರಿಗೆ ತೆರಳಿದ ಪೈಲಟ್
ಮೈಸೂರು, NOV.14,2026: ಪ್ರಧಾನಿ ನರೇಂದ್ರ ಮೋದಿ ಅವರ ಮೈಸೂರು ಭೇಟಿ ಸಂದರ್ಭದಲ್ಲಿ ಭದ್ರತಾ ಬೆಂಗಾವಲಿಗೆ ಬಂದಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ವೊಂದು ತಾಂತ್ರಿಕ ದೋಷದಿಂದ ಮೈಸೂರಿನಲ್ಲೇ ಉಳಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಮಧ್ಯಾಹ್ನ 3.20ರ ಸುಮಾರಿಗೆ ಮೈಸೂರಿನ ಲಲಿತಾ ಮಹಲ್ ಹೆಲಿಪ್ಯಾಡ್‌ಗೆ ಆಗಮಿಸಿದ್ದರು. ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯ ಭಾಗವಾಗಿ ಒಟ್ಟು ಮೂರು ಹೆಲಿಕಾಪ್ಟರ್‌ಗಳು ಸ್ಥಳದಲ್ಲಿದ್ದವು ಎನ್ನಲಾಗಿದೆ.
ಪ್ರಧಾನಿ ಮೋದಿ ಆಗಮಿಸಿದ ಬಳಿಕ ಅವರ ಹೆಲಿಕಾಪ್ಟರ್ ಸೇರಿದಂತೆ ಎರಡು ಹೆಲಿಕಾಪ್ಟರ್‌ಗಳು ಟೇಕ್‌ಆಫ್ ಆಗಿದ್ದವು. ಆದರೆ ಮತ್ತೊಂದು ಹೆಲಿಕಾಪ್ಟರ್ ಮಾತ್ರ ತಾಂತ್ರಿಕ ದೋಷದ ಕಾರಣದಿಂದ ಲಲಿತಾ ಮಹಲ್ ಹೆಲಿಪ್ಯಾಡ್‌ನಲ್ಲೇ ಉಳಿದಿತ್ತು.

ಬೆಂಗಳೂರಿನಿಂದ ಬಂದಿದ್ದ ಹೆಲಿಕಾಪ್ಟರ್ ಹಾರಲೇ ಇಲ್ಲ!
ಪ್ರಧಾನಿ ಮೋದಿ ಅವರ ಭದ್ರತಾ ಬೆಂಗಾವಲಿನ ಭಾಗವಾಗಿ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದ ಈ ವಿಶೇಷ ಸೇನಾ ಹೆಲಿಕಾಪ್ಟರ್, ಮೈಸೂರಿಗೆ ಬಂದ ಬಳಿಕ ತಾಂತ್ರಿಕ ಕಾರಣದಿಂದ ಹಾರಾಟ ನಡೆಸದೆ ಅಲ್ಲೇ ನಿಂತಿತ್ತು.
ಹೆಲಿಕಾಪ್ಟರ್‌ನಲ್ಲಿ ದೋಷ ಉಂಟಾದ ಹಿನ್ನೆಲೆಯಲ್ಲಿ ತಾಂತ್ರಿಕ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಘಟನೆಯಿಂದಾಗಿ ಪ್ರಧಾನಿ ಮೋದಿ ಅವರ ಆಗಮನ ಮತ್ತು ನಿರ್ಗಮನದ ವೇಳೆ ಭದ್ರತಾ ವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳು ಚರ್ಚೆಗೆ ಬಂದಿವೆ.
ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುವ ಮುನ್ನವೇ ಈ ತಾಂತ್ರಿಕ ದೋಷ ಕಂಡುಬಂದಿತ್ತೇ?
ದೋಷ ಆಗಮನದ ವೇಳೆಯೇ ಕಾಣಿಸಿಕೊಂಡಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಎಂಬ ಪ್ರಶ್ನೆಗಳೂ ಇದೀಗ ಚರ್ಚೆಗೆ ಕಾರಣವಾಗಿವೆ.
ಆದರೆ ಪ್ರಧಾನಿ ಮೋದಿ ಅವರ ಆಗಮನ ಮತ್ತು ನಿರ್ಗಮನ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸದೆ, ಭದ್ರತಾ ವ್ಯವಸ್ಥೆ ಸುಗಮವಾಗಿ ಪೂರ್ಣಗೊಂಡಿದೆ.

ಕೊನೆಗೂ ರಿಪೇರಿ — ಇಂದು ಬೆಳಗ್ಗೆ ಹಾರಾಟ
ತಾಂತ್ರಿಕ ದೋಷದಿಂದ ನಿನ್ನೆ ಮೈಸೂರಿನಲ್ಲೇ ಉಳಿದಿದ್ದ ಹೆಲಿಕಾಪ್ಟರ್‌ನ್ನು ದುರಸ್ತಿ ಮಾಡಿದ ಬಳಿಕ, ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಹಾರಾಟ ನಡೆಸಲಾಗಿದೆ.
ಪೈಲಟ್ ಹೆಲಿಕಾಪ್ಟರ್‌ನ್ನು ಮೈಸೂರಿನಿಂದ ಬೆಂಗಳೂರಿನತ್ತ ಕೊಂಡೊಯ್ದಿದ್ದಾರೆ. ಈ ಮೂಲಕ ನಿನ್ನೆ ಇಡೀ ರಾತ್ರಿ ಲಲಿತಾ ಮಹಲ್ ಹೆಲಿಪ್ಯಾಡ್‌ನಲ್ಲಿ ನಿಂತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಕೊನೆಗೂ ಮೈಸೂರಿನಿಂದ ತೆರಳಿದೆ.
ಪ್ರಧಾನಿ ಮೋದಿ ಅವರ ಭದ್ರತಾ ಬೆಂಗಾವಲಿಗೆ ನಿಯೋಜಿಸಲಾಗಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಹಾರಾಟ ನಡೆಸದೆ ಮೈಸೂರಿನಲ್ಲೇ ಉಳಿದಿದ್ದ ಘಟನೆ ಇದೀಗ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
ಮಾಹಿತಿ ಅಲಭ್ಯ:
ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹಾಗೂ ನಗರ ಪೊಲೀಸ್ ಆಯುಕ್ತೆ ಸೀಮಾ ಲಟ್ಕರ್ ಅವರನ್ನು ಜಸ್ಟ್ ಕನ್ನಡ ಸಂಪರ್ಕಿಸಿದಾಗ ಯಾವುದೇ ಮಾಹಿತಿ ಲಭಿಸಲಿಲ್ಲ. ಇದು ಸಂಪೂರ್ಣ ಪ್ರಧಾನಿಗಳ ಎಸ್ಪಿಜಿ ವ್ಯಾಪ್ತಿಗೆ ಬರುತ್ತದೆ ಎಂಬ ಉತ್ತರ ಲಭಿಸಿತು.

KEY WORDS:
Indian Air Force helicopter, Mysuru PM Modi, Mysuru visit 2026, Lalitha Mahal helipad, Helicopter technical glitch, Modi security helicopter, Mysuru latest news, Bengaluru helicopter flight







